ರಮಝಾನ್ ಉಪವಾಸ ಮಾನಸಿಕ ಮತ್ತು ಆಧ್ಯಾತ್ಮಿಕ ವ್ಯಾಯಾಮ: ಹಾಶಿಮ್ ಅಮ್ಲ

Update: 2019-05-28 09:55 GMT

ಲಂಡನ್, ಮೇ 28: ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರ ಹಾಶಿಮ್ ಅಮ್ಲ  ಅವರು ತಮ್ಮ ಕ್ರಿಕೆಟ್ ಜೀವನದ ಅತ್ಯಂತ ದೊಡ್ಡ  ಸವಾಲನ್ನು ಎದುರಿಸಲು ಸಿದ್ಧರಾಗುತ್ತಿದ್ದಾರೆ. ಐಸಿಸಿ ವಿಶ್ವಕಪ್ 2019ಗಾಗಿ ಅವರು ಸದ್ಯ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಸ್ಲಿಮರ ಪವಿತ್ರ ತಿಂಗಳಾದ ರಮಝಾನ್ ಸಂದರ್ಭ ವಿಶ್ವಕಪ್ ಎನ್ನುವುದು ತನ್ನ ಜೀವನದ ಸವಾಲಾಗಿದ್ದು, ಈ ಸವಾಲನ್ನು ಎದುರಿಸುತ್ತಿರುವುದು ಖುಷಿ ನೀಡಿದೆ ಎಂದವರು ಹೇಳುತ್ತಾರೆ.

“ನನ್ನ ದೈಹಿಕ ಹಾಗೂ ಮಾನಸಿಕ ಸನ್ನದ್ಧತೆಗೆ ರಮಝಾನ್ ತಿಂಗಳ ಉಪವಾಸ ಸಹಕಾರಿ'' ಎಂದು ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ವಾರ್ಮ್-ಅಪ್ ಪಂದ್ಯದ ನಂತರ ಹಾಶಿಮ್ ಅಮ್ಲ ಹೇಳಿದರು.

“ಉಪವಾಸವನ್ನು ನಾನು ಯಾವಾಗಲೂ ಎದುರು ನೋಡುತ್ತೇನೆ. ಇದು ವರ್ಷದ ಅತ್ಯುತ್ತಮ ತಿಂಗಳು. ಇದು ನನಗೆ ಅತ್ಯುತ್ತಮ ಮಾನಸಿಕ ವ್ಯಾಯಾಮದ ಜತೆಗೆ ಆಧ್ಯಾತ್ಮಿಕ ವ್ಯಾಯಾಮವನ್ನೂ ನೀಡುತ್ತದೆ'' ಎನ್ನುತ್ತಾರೆ ಅಮ್ಲ.

ಏಳು ವರ್ಷಗಳ ಹಿಂದೆ 2011ರಲ್ಲಿ ಅವರು ದಕ್ಷಿಣ ಆಫ್ರಿಕಾದ ಅತ್ಯಧಿಕ ರನ್ ಬಾರಿಸಿದ ಟೆಸ್ಟ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಆ  ಸಂದರ್ಭ ಇಂಗ್ಲೆಂಡ್ ನಲ್ಲಿ ರಮಝಾನ್ ತಿಂಗಳಲ್ಲೇ ಪಂದ್ಯ ನಡೆದಿತ್ತು.

ಇಲ್ಲಿಯ ತನಕ 174 ಏಕದಿನ ಪಂದ್ಯಗಳನ್ನು ಆಡಿರುವ ಹಾಶಿಮ್ ಅಮ್ಲ ಒಟ್ಟು 27 ಶತಕಗಳನ್ನು ಸಿಡಿಸಿ 7,910 ರನ್ (ಸರಾಸರಿ 49.74) ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News