ನೂತನ ಸಂಸದ ತೇಜಸ್ವಿ ಸೂರ್ಯಗೆ ಕರೆ ಮಾಡಿದ ಭಾರತ ರತ್ನ ಪ್ರೊ.ಸಿ ಎನ್. ಆರ್ ರಾವ್ ಹೇಳಿದ್ದೇನು?

Update: 2019-05-30 10:32 GMT

ಹೊಸದಿಲ್ಲಿ, ಮೇ 30: ಬಿಜೆಪಿಯ ಅತ್ಯಂತ ಕಿರಿಯ ಸಂಸದ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗೆದ್ದಿರುವ 28 ವರ್ಷದ ತೇಜಸ್ವಿ ಸೂರ್ಯ ಅವರಿಗೆ ದೇಶದ ಹಿರಿಯ ವಿಜ್ಞಾನಿ ಸಿಎನ್‍ಆರ್ ರಾವ್ ಎಂದೇ ಖ್ಯಾತರಾದ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

“ಈಗಷ್ಟೇ ಭಾರತ ರತ್ನ ಪ್ರೊ ಸಿಎನ್‍ಆರ್ ರಾವ್ ಅವರಿಂದ ಕರೆ ಬಂತು. ನಾನು ಬೆಂಗಳೂರು ದಕ್ಷಿಣ ನಿವಾಸಿ ಹಾಗೂ ನಿಮ್ಮಂತಹ ಯುವ ಜನಪ್ರತಿನಿಧಿಯನ್ನು ಪಡೆಯಲು ಖುಷಿಯಾಗಿದೆ. ಚಿಕ್ಕಂದಿನಲ್ಲಿ ನಾನು ಬಸವನಗುಡಿಯಲ್ಲಿ ಆರೆಸ್ಸೆಸ್ ಶಾಖೆಗೆ ಭೇಟಿ ನೀಡುತ್ತಿದ್ದೆ. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸಾಯನ್ಸ್ ಗೆ ಬನ್ನಿ, ನನ್ನನ್ನು ಭೇಟಿಯಾಗಿ ಎಂದರು. ವಿನಮ್ರತೆ ಮಹಾನ್ ವ್ಯಕ್ತಿಗಳ ಹೆಗ್ಗುರುತು'' ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

ಸಿಎನ್‍ಆರ್ ರಾವ್ ಅವರಿಗೆ 2014ರಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.  ಸಿ ವಿ ರಾಮನ್ ಹಾಗೂ ಎ ಪಿ ಜೆ ಅಬ್ದುಲ್ ಕಲಾಂ ಅವರ ನಂತರ ಈ ಅತ್ಯುನ್ನತ ಗೌರವ ಪಡೆದ ಮೂರನೇ ವಿಜ್ಞಾನಿ ಅವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News