ಕಾಂಗ್ರೆಸ್ ತೊರೆದು ಟಿಆರ್‌ಎಸ್ ಸೇರಲು ಮುಂದಾದ 12 ಶಾಸಕರು

Update: 2019-06-06 11:18 GMT

ಹೈದರಾಬಾದ್, ಜೂ.6: ಡಿಸೆಂಬರ್‌ನಲ್ಲಿ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಮತ್ತೊಂದು ಮುಜುಗರ ಸನ್ನಿವೇಶ ಎದುರಿಸುತ್ತಿದ್ದು, ಪಕ್ಷದ 12 ಜನಪ್ರತಿನಿಧಿಗಳು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಗೆ(ಟಿಆರ್‌ಎಸ್)ವಿಲೀನಗೊಳ್ಳಲು ಮುಂದಾಗಿದ್ದಾರೆ.

18 ಶಾಸಕರ ಪೈಕಿ 12 ಶಾಸಕರು ಗುರುವಾರ ತೆಲಂಗಾಣದ ಅಸೆಂಬ್ಲಿ ಸ್ಪೀಕರ್ ಪೊಚರಮ್ ಶ್ರೀನಿವಾಸರನ್ನು ಬೇಟಿಯಾಗಿ ಸ್ಥಳೀಯ ಪಕ್ಷ ಟಿಆರ್‌ಎಸ್‌ನೊಂದಿಗೆ ವಿಲೀನವಾಗುವ ಪ್ರಸ್ತಾವ ಮಂಡಿಸಿದ್ದಾರೆ. ತೆಲಂಗಾಣ ಅಸೆಂಬ್ಲಿಯ ಒಟ್ಟು 19 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ತನ್ನ ನಿಷ್ಠೆಯನ್ನು ಆಡಳಿತಾರೂಢ ಟಿಆರ್‌ಎಸ್‌ಗೆ ಬದಲಿಸಿದ್ದಾರೆ.

ಪಕ್ಷದ ಶಾಸಕರು ಟಿಆರ್‌ಎಸ್‌ನೊಂದಿಗೆ ವಿಲೀನವಾಗುವ ಪ್ರಕ್ರಿಯೆಯನ್ನು ಪ್ರತಿಭಟಿಸಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉತ್ತಮ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ವಿಧಾನಸೌಧದ ಒಳಗೆ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದರು.

  ‘‘ಅಸೆಂಬ್ಲಿಯಲ್ಲಿ ವಿಪಕ್ಷಗಳ ಧ್ವನಿಯನ್ನು ಸಂಪೂರ್ಣ ಅಡಗಿಸಲು ಮಾಡುತ್ತಿರುವ ಪ್ರಯತ್ನ ಇದಾಗಿದೆ. ಆಡಳಿತ ಪಕ್ಷ ಟಿಆರ್‌ಎಸ್‌ನೊಂದಿಗೆ ಶಾಸಕರ ಸೇರ್ಪಡೆಯ ಹಿಂದೆ ಹಣದ ವ್ಯವಹಾರ ನಡೆದಿದೆ’’ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News