ಸೊಮಾಲಿಯದಲ್ಲಿ 20 ಲಕ್ಷ ಮಂದಿ ಹಸಿವಿನಿಂದ ಸಾಯಬಹುದು: ವಿಶ್ವಸಂಸ್ಥೆ ಅಧಿಕಾರಿ ಎಚ್ಚರಿಕೆ

Update: 2019-06-06 17:50 GMT

ನ್ಯೂಯಾರ್ಕ್, ಜೂ. 6: ಬರಗಾಲಪೀಡಿತ ಸೊಮಾಲಿಯಕ್ಕೆ ಅಂತರ್‌ ರಾಷ್ಟ್ರೀಯ ನೆರವು ಕ್ಷಿಪ್ರವಾಗಿ ತಲುಪದಿದ್ದರೆ, ಈ ಬೇಸಿಗೆಯ ಕೊನೆಯ ವೇಳೆಗೆ ಅಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ಹಸಿವಿನಿಂದ ಸಾಯಬಹುದು ಎಂದು ವಿಶ್ವಸಂಸ್ಥೆಯ ಪರಿಹಾರ ಸಮನ್ವಯಕಾರರೂ ಆಗಿರುವ ಅಧೀನ ಮಹಾಕಾರ್ಯದರ್ಶಿ ಮಾಕ್ ಲೋಕಾಕ್ ಎಚ್ಚರಿಸಿದ್ದಾರೆ.

ಮಳೆಯಿಲ್ಲದ ಋತುವಿನ ಬಳಿಕ, ಪರಿಹಾರಕ್ಕಾಗಿ 700 ಮಿಲಿಯ ಡಾಲರ್ (ಸುಮಾರು 4,850 ಕೋಟಿ ರೂಪಾಯಿ) ಮೊತ್ತ ಅಗತ್ಯವಿದೆ ಎಂದು ಅವರು ಹೇಳಿದರು.

ಮಳೆರಹಿತ ಮಳೆಗಾಲದಿಂದಾಗಿ ಸಾಕುಪ್ರಾಣಿಗಳು ಸತ್ತಿವೆ ಹಾಗೂ ಬೆಳೆಗಳು ನಾಶಹೊಂದಿವೆ.

 ಸೊಮಾಲಿಯದ ಆಹಾರ, ನೀರು ಮತ್ತು ದೈನಂದಿನ ಅವಶ್ಯಕತೆಗಳ ಪೂರೈಕೆಗಾಗಿ ವಿಶ್ವಸಂಸ್ಥೆಯು 45 ಮಿಲಿಯ ಡಾಲರ್ (ಸುಮಾರು 311 ಕೋಟಿ ರೂಪಾಯಿ) ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News