ಆಸ್ಟ್ರೇಲಿಯ ಸ್ಪಿನ್ನರ್ ಝಾಂಪಗೆ ಐಸಿಸಿ ವಾಗ್ದಂಡನೆ

Update: 2019-06-07 18:46 GMT

ಲಂಡನ್, ಜೂ.7: ವೆಸ್ಟ್‌ಇಂಡೀಸ್ ವಿರುದ್ಧ ಟ್ರೆಂಟ್‌ಬ್ರಿಡ್ಜ್‌ನಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಅಶ್ಲೀಲ ಪದ ಬಳಸಿದ ಕಾರಣಕ್ಕೆ ಐಸಿಸಿ ವಾಗ್ದಂಡನೆ ವಿಧಿಸಿದೆ. ‘‘ಆಸ್ಟ್ರೇಲಿಯ ಬೌಲರ್ ಆಡಮ್ ಝಾಂಪಗೆ ಆಸ್ಟ್ರೇಲಿಯ-ವೆಸ್ಟ್ ಇಂಡೀಸ್ ಮಧ್ಯೆ ನಡೆದ ವಿಶ್ವಕಪ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆ ಲೆವೆಲ್-1ನ್ನು ಉಲ್ಲಂಘಿಸಿರುವುದಕ್ಕೆ ವಾಗ್ದಂಡನೆ ವಿಧಿಸಲಾಗಿದೆ’’ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ. ಅಧಿಕೃತ ಎಚ್ಚರಿಕೆಯ ಜೊತೆಗೆ ಝಾಂಪರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಅಂಕ ಸೇರಿಸಲಾಗಿದೆ. ವೆಸ್ಟ್‌ಇಂಡೀಸ್ ಇನಿಂಗ್ಸ್‌ನ 29ನೇ ಓವರ್‌ನಲ್ಲಿ ಝಾಂಪ ಅಶ್ಲೀಲ ಪದ ಬಳಸಿರುವುದನ್ನು ಅಂಪೈರ್‌ಗಳು ಗಮನಿಸಿದ್ದಾರೆ. ಝಾಂಪ ಮ್ಯಾಚ್ ರೆಫರಿ ಜೆಫ್ ಕ್ರೋವ್ ವಿಧಿಸಿರುವ ಶಿಕ್ಷೆಯನ್ನು ಸ್ವೀಕರಿಸಿದ್ದು, ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News