ರೋಮ್ ದೊರೆ ನೀರೋ ಆತ್ಮಹತ್ಯೆ

Update: 2019-06-08 18:30 GMT

ಕ್ರಿ.ಶ 68: ‘ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸುತ್ತಿದ್ದ’ ಖ್ಯಾತಿಯ ರೋಮ್ ದೊರೆ ನೀರೋ ತನ್ನ ಮೂವತ್ತನೇ ವಯಸ್ಸಿನಲ್ಲಿ ಇಂದಿನ ದಿನ ಆತ್ಮಹತ್ಯೆ ಮಾಡಿಕೊಂಡ.

1752: ತಿರುಚಿನಾಪಲ್ಲಿಯಲ್ಲಿ ನಡೆದ ಕದನದಲ್ಲಿ ಫ್ರೆಂಚ್ ಪಡೆಯು ಬ್ರಿಟಿಷ್ ಸೇನೆಗೆ ಶರಣಾಯಿತು.

1931:ವಿಶ್ವದ ಪ್ರಥಮ ರಾಕೆಟ್ ಚಾಲಿತ ವಿಮಾನದ ವಿನ್ಯಾಸ ಮಾಡಿದ ಅಮೆರಿಕದ ವಿಜ್ಞಾನಿ ರಾಬರ್ಟ್ ಗೊಡ್ಡಾರ್ಡ್‌ಗೆ ಹಕ್ಕುಸ್ವಾಮ್ಯ ನೀಡಲಾಯಿತು.

1941: ಬೆಲ್‌ಗ್ರೇಡ್‌ನ ಫೋರ್ಟ್ ಸ್ಮೆಡೆರೊವೊ ಎಂಬಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟಿದ್ದ ಕೋಣೆ ಸ್ಫೋಟಗೊಂಡು 1,500 ಜನ ಮೃತಪಟ್ಟರು.

1960: ಚೀನಾದಲ್ಲಿ ಬೀಸಿದ ಮೇರಿ ಹೆಸರಿನ ಭಯಂಕರ ಚಂಡಮಾರುತಕ್ಕೆ ಕನಿಷ್ಠ 1,600 ಜನ ಬಲಿಯಾದ ಘಟನೆ ವರದಿಯಾಗಿದೆ.

1999: ‘ಕೊಸಾವೊ ವಾರ್’ಗೆ ಸಂಬಂಧಿಸಿದಂತೆ ಯುಗೊಸ್ಲಾವಿಯಾ ಗಣರಾಜ್ಯ ಹಾಗೂ ನ್ಯಾಟೋ ಮಧ್ಯೆ ಶಾಂತಿ ಒಪ್ಪಂದ ಏರ್ಪಟ್ಟಿತು.

2013: ಅಮೆರಿಕದ ರಾಷ್ಟ್ರೀಯ ಭದ್ರತಾ ಏಜೆನ್ಸಿ (ಎನ್‌ಎಸ್‌ಎ)ಯ ದಾಖಲೆಗಳನ್ನು ತಾನೇ ಸೋರಿಕೆ ಮಾಡಿರುವುದಾಗಿ ಕಾಂಟ್ರಾಕ್ಟರ್ ಎಡ್ವರ್ಡ್ ಸ್ನೋಡೆನ್ ಒಪ್ಪಿಕೊಂಡನು. ಈ ಘಟನೆ ವಿಶ್ವಾದ್ಯಂತ ಭಾರೀ ಸದ್ದು ಮಾಡಿತ್ತು.

1949: ಭಾರತದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್‌ಬೇಡಿ ಜನ್ಮದಿನ.

1900: ಭಾರತದ ಸ್ವಾತಂತ್ರ ಹೋರಾಟದ ಕಿಡಿ, ಬುಡಕಟ್ಟು ಸಮುದಾಯದ ಮುಖಂಡ ಬಿರ್ಸಾ ಮುಂಡಾ ಇಂದು ರಾಂಚಿ ಜೈಲಿನಲ್ಲಿ ನಿಧನರಾದರು.

2011: ಚಿತ್ರ ಕಲಾವಿದ ಎಂ.ಎಫ್. ಹುಸೈನ್ ನಿಧನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ