ಅಫ್ಘಾನಿಸ್ತಾನ 172ಕ್ಕೆ ಆಲೌಟ್

Update: 2019-06-08 18:56 GMT

ಟೌಂಟನ್, ಜೂ.8: ನ್ಯೂಝಿಲ್ಯಾಂಡ್ ವಿರುದ್ಧ ವಿಶ್ವಕಪ್‌ನ 13ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 41.1 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟಾಗಿದೆ.

 ಶನಿವಾರ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ ನ್ಯೂಝಿಲ್ಯಾಂಡ್‌ನ ಜೇಮ್ಸ್ ನಿಶಾಮ್ (31ಕ್ಕೆ 5) ಮತ್ತು ಲೊಕೈ ಫರ್ಗ್ಯುಸನ್ (37ಕ್ಕೆ 4) ದಾಳಿಗೆ ಸಿಲುಕಿ ಬೇಗನೇ ಇನಿಂಗ್ಸ್ ಮುಗಿಸಿತು.

ಅಫ್ಘಾನಿಸ್ತಾನದ ಪರ ಹಶ್ಮತುಲ್ಲಾ ಶಾಹಿದಿ (59) ಗರಿಷ್ಠ ಸ್ಕೋರ್ ದಾಖಲಿಸಿದರು. ಇವರನ್ನು ಹೊರತುಪಡಿಸಿದರೆ ಹಝ್ರತುಲ್ಲಾ ಝಝಾಯ್ (34) , ನೂರ್ ಅಲಿ ಝಾರ್ದಾನ್(31) ಮತ್ತು ಅಫ್ತಾಬ್ ಆಲಮ್(14) ಎರಡಂಕೆಯ ಸ್ಕೋರ್ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News