ಕೊಹ್ಲಿಗೆ ವಿಶಿಷ್ಟವಾಗಿ ವಿಶ್ವಕಪ್ ಶುಭ ಕೋರಿದ ದಿಲ್ಲಿಯ ಶಾಲೆ

Update: 2019-06-08 19:01 GMT

ಹೊಸದಿಲ್ಲಿ, ಜೂ.8: ವಿರಾಟ್ ಕೊಹ್ಲಿ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಕ್ರಿಕೆಟ್ ಆಡುತ್ತಿದ್ದು, ಕಪಿಲ್‌ದೇವ್(1983) ಹಾಗೂ ಎಂಎಸ್ ಧೋನಿ(2011) ಬಳಿಕ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮೂರನೇ ನಾಯಕನಾಗುವತ್ತ ಚಿತ್ತವಿರಿಸಿದ್ದಾರೆ. ಕೊಹ್ಲಿ ಬಾಲ್ಯದಲ್ಲಿ ಕಲಿತಿರುವ ಶಾಲೆಯೊಂದು ಬಹಳ ವಿಶಿಷ್ಟ ರೀತಿಯಲ್ಲಿ ಕೊಹ್ಲಿಗೆ ವಿಶ್ವಕಪ್‌ಗೆ ಶುಭಾಶಯ ಕೋರಿದೆ.

  ಕೊಹ್ಲಿ ತನ್ನ ಬಾಲ್ಯದಲ್ಲಿ ದಿಲ್ಲಿಯ ಉತ್ತಮ್‌ನಗರದಲ್ಲಿರುವ ವಿಶಾಲ್ ಭಾರತಿ ಪಬ್ಲಿಕ್ ಸ್ಕೂಲ್‌ನಲ್ಲಿ ಕಲಿತಿದ್ದರು. ಕೊಹ್ಲಿ ಕ್ರಿಕೆಟ್ ಕಲಿತ ಶಾಲೆಯ ಮಣ್ಣನ್ನು ಲಂಡನ್‌ಗೆ ಕಳುಹಿಸಿಕೊಟ್ಟಿರುವ ಶಾಲಾಡಳಿತ ವಿಶ್ವಕಪ್ ಗೆದ್ದು ಬಾ ಎಂದು ಶುಭ ಹಾರೈಸಿದೆ.

ವಿಶ್ವಕಪ್ ಪ್ರಸಾರದ ಹೊಣೆಹೊತ್ತಿರುವ ಸ್ಟಾರ್ ಸ್ಪೋರ್ಟ್ಸ್,ವಿಶಾಲ್ ಪಬ್ಲಿಕ್ ಸ್ಕೂಲ್ ಲಂಡನ್‌ಗೆ ಕಳುಹಿಸಿರುವ ಮಣ್ಣು ತುಂಬಿರುವ ಗಾಜಿನ ಚಿತ್ರವನ್ನು ಟ್ವೀಟ್ ಮಾಡಿದೆ. ಕೊಹ್ಲಿ ತನ್ನ ಶಾಲಾ ಜೀವನವನ್ನು ವಿಶಾಲ್ ಭಾರತಿ ಸ್ಕೂಲ್‌ನಲ್ಲಿ ಆರಂಭಿಸಿದ್ದರು. ಆ ನಂತರ ಕಾನ್ವೆಂಟ್‌ಗೆ ಸೇರಿದ್ದರು. ವಿಶಾಲ್ ಭಾರತಿಯಲ್ಲಿ ಓದುತ್ತಿರುವಾಗಲೇ 1998ರಲ್ಲಿ ಪಶ್ಚಿಮ ದಿಲ್ಲಿ ಕ್ರಿಕೆಟ್ ಅಕಾಡಮಿಗೆ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News