ಚೆಂಡು ಬೌಂಡರಿ ಲೈನ್ ನ ಹೊರಕ್ಕೆ ಬಿದ್ದರೂ ಬ್ಯಾಟ್ಸ್ ಮನ್ ಔಟ್… !

Update: 2019-06-09 09:50 GMT

ಹೊಸದಿಲ್ಲಿ, ಜೂ.9:  ಹನ್ನೆರಡನೇ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ  ಇಂಗ್ಲೆಂಡ್ ನ ವೇಗಿ ಆರ್ಚರ್ ಎಸೆದ ಚೆಂಡು ಬಾಂಗ್ಲಾದ ಬೌಲರ್ ಸೌಮ್ಯ ಸರ್ಕಾರ್  ಬ್ಯಾಟ್  ಸ್ಪರ್ಶಿಸದೆ ಬೌಂಡರಿ ಲೈನ್ ನ ಹೊರಕ್ಕೆ ಹಾರಿದ್ದು, ಬ್ಯಾಟ್ಸ್ ಮನ್ ಸರ್ಕಾರ್ ಔಟಾಗಿದ್ದಾರೆ.

ಚೆಂಡು ಸರ್ಕಾರ್ ಬ್ಯಾಟ್ ನ್ನು ಸ್ಪರ್ಶಿಸಿದಂತೆ ಕಂಡು  ಬಂದಿದೆ. ಆದರೆ  ಬಾಂಗ್ಲಾದ ಖಾತೆಗೆ ಸಿಕ್ಸರ್    ಸೇರ್ಪಡೆಗೊಳ್ಳುತ್ತದೆ ಅಂದುಕೊಂಡವರಿಗೆ ಅಂಪೈರ್ ತೀರ್ಪು ಕೇಳಿ ಅಚ್ಚರಿ ಉಂಟಾಗಿತ್ತು. ಯಾಕೆಂದರೆ ಚೆಂಡು ಬ್ಯಾಟ್ ನ್ನು ವಂಚಿಸಿ   ಸ್ಟಂಪ್ ಗೆ ಬಡಿದಿತ್ತು.

ಕೇವಲ 2 ರನ್ ಗಳಿಸಿದ್ದ ಸೌಮ್ಯ  ಸರ್ಕಾರ್ ಬೌಲ್ಡ್ ಆಗಿದ್ದರು. 8 ರನ್ ಗೆ ಬಾಂಗ್ಲಾದ ಮೊದಲ ವಿಕೆಟ್ ಪತನಗೊಂಡಿತ್ತು. ಆರ್ಚರ್ ದಾಳಿಯಲ್ಲಿ ಚೆಂಡು ಬೇಲ್ಸ್ ನ್ನು ಕೆಳಗೆ ಬೀಳಿಸಿರುವುದನ್ನು ಕ್ಯಾಮರಾ ಸೆರೆ ಹಿಡಿದಿತ್ತು. 

ಗೆಲುವಿಗೆ 370 ರನ್ ಗಳ ಸವಾಲನ್ನು ಪಡೆದಿದ್ದ ಬಾಂಗ್ಲಾ 280 ರನ್ ಗಳಿಗೆ ಆಲೌಟಾಗಿ 106 ರನ್ ಗಳ ಸೋಲುಂಡಿದೆ.

ವೀಡಿಯೊ ವೀಕ್ಷಿಸಲು ಕ್ಲಿಕ್ ಮಾಡಿ

https://www.cricketworldcup.com/video/1239113/cwc19-eng-v-ban-archer-takes-the-top-of-off-stum

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News