ನಾಲ್ಕು ರಾಜ್ಯಗಳಲ್ಲಿ ದಾಖಲೆ ತಾಪಮಾನ

Update: 2019-06-11 18:02 GMT

ಹೊಸದಿಲ್ಲಿ, ಜೂ.11: ದೇಶದಲ್ಲಿ ಇದುವರೆಗಿನ ಅತ್ಯಂತ ಗರಿಷ್ಟ ತಾಪಮಾನ ಈ ಬಾರಿ ದಾಖಲಾಗಿದೆ. ಉತ್ತರ ಭಾರತದ ನಾಲ್ಕು ನಗರಗಳು ಅತ್ಯಂತ ಗರಿಷ್ಟ ತಾಪಮಾನ ದಾಖಲಿಸಿದೆ. ರಾಷ್ಟ್ರೀಯ ರಾಜಧಾನಿ ದಿಲ್ಲಿ, ರಾಜಸ್ತಾನದ ಚುರು, ಉತ್ತರಪ್ರದೇಶದ ಬಾಂದ ಮತ್ತು ಅಲಹಾಬಾದ್ ನಗರಗಳಲ್ಲಿ 48 ಡಿಗ್ರಿ ಸೆಲ್ಶಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ.

ಸತತ ಎರಡು ದಿನ 45 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾದರೆ ಅದನ್ನು ಉಷ್ಣ ಗಾಳಿ ಅಥವಾ ಬಿಸಿ ಗಾಳಿ ಎಂದು ವರ್ಗೀಕರಿಸಲಾಗುತ್ತದೆ. ತಾಪಮಾನ 47 ಡಿಗ್ರಿ ಸೆಲ್ಶಿಯಸ್‌ಗೆ ತಲುಪಿದರೆ ಅದನ್ನು ತೀವ್ರ ಬಿಸಿಗಾಳಿ ಎಂದು ಹೆಸರಿಸಲಾಗುತ್ತದೆ. ಕಳೆದ ವಾರ ಎರಡು ಬಾರಿ ಚುರು ನಗರದಲ್ಲಿ ತಾಪಮಾನ 50 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಬಾಂದದಲ್ಲಿ 49.2 ಡಿಗ್ರಿ ಸೆಲ್ಶಿಯಸ್, ಅಲಹಬಾದ್‌ನಲ್ಲಿ 48.9 ಡಿಗ್ರಿ ಸೆಲ್ಶಿಯಸ್, ದಿಲ್ಲಿಯಲ್ಲಿ 48 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಕಳೆದ ಹಲವು ವರ್ಷಗಳಿಂದ ಉಷ್ಣಗಾಳಿಯ ಪ್ರಮಾಣ ಹೆಚ್ಚುತ್ತಿದೆ. ಭಾರತದಲ್ಲಿ 2004ರ ಬಳಿಕ 11 ಬಾರಿ ಗರಿಷ್ಟ ಬಿಸಿಗಾಳಿಯ ಪರಿಸ್ಥಿತಿ ಸಂಭವಿಸಿದೆ. ಇದು ಹವಾಮಾನ ಬದಲಾವಣೆಯ ಒಂದು ಭಾಗವಾಗಿದ್ದು ಜಾಗತಿಕವಾಗಿ ಆಗಿಂದಾಗ್ಗೆ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News