ಬೆಂಗಳೂರಿನಲ್ಲಿ ವಿದ್ಯುತ್ ತಂತಿಗಳನ್ನು ಭೂಗತ ಕೇಬಲ್‌ಗಳಾಗಿ ಪರಿವರ್ತನೆ: 15 ದಿನದಲ್ಲಿ ಕಾಮಗಾರಿ ಪ್ರಾರಂಭ

Update: 2019-06-13 12:40 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.13: ನಗರದಲ್ಲಿ ವಿದ್ಯುತ್ ಲೈನ್‌ಗಳನ್ನು ಭೂಗತ ಕೇಬಲ್‌ಗಳಾಗಿ ಪರಿವರ್ತಿಸುವ ಕಾಮಗಾರಿಯನ್ನು ಮುಂದಿನ 15ದಿನದಲ್ಲಿ ಕೈಗೆತ್ತಿಕೊಳ್ಳಲು ಬೆಸ್ಕಾಂ ನಿರ್ಧರಿಸಿದೆ.

ನಗರದ 63 ಉಪ ವಿಭಾಗಗಳ ಪೈಕಿ 52ರಲ್ಲಿ ವಿದ್ಯುತ್ ತಂತಿಗಳ ಬದಲಿಗೆ ಭೂಗತ ಕೇಬಲ್‌ಗಳನ್ನು ಅಳವಡಿಸುವುದು ಬಾಕಿ ಇದೆ. ಈಗ 29 ಉಪ ವಿಭಾಗಗಳಿಗೆ ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಇದಕ್ಕೆ ಲೆಕ್ಕ ಪರಿಶೋಧನಾ ಕಾರ್ಯ ನಡೆಯುತ್ತಿದ್ದು, ಶೀಘ್ರವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಬೆಸ್ಕಾಂನ ಮುಖ್ಯ ಎಂಜಿನಿಯರ್ ಬಿ.ಎನ್. ನಾಗರಾಜಯ್ಯ ತಿಳಿಸಿದ್ದಾರೆ. 15 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಒಟ್ಟು ಮೂರು ವರ್ಷದ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ವಿದ್ಯುತ್ ತಂತಿಗಳ ಬದಲಿಗೆ ಭೂಗತ ಕೇಬಲ್‌ಗಳನ್ನು ಸಂಪೂರ್ಣವಾಗಿ ಅಳವಡಿಸಲು ಬೆಸ್ಕಾಂ ಯೋಜನೆ ಹಾಕಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News