ತನ್ನದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಭಾರತದ ಯೋಜನೆ: ಇಸ್ರೋ ಮುಖ್ಯಸ್ಥ ಕೆ.ಶಿವನ್

Update: 2019-06-13 15:13 GMT

ಹೊಸದಿಲ್ಲಿ, ಜೂ. 13: ಭಾರತ ಎರಡು ಬಾಹ್ಯಾಕಾಶ ನಿಲ್ದಾಣಗಳನ್ನು ಆರಂಭಿಸಲು ಯೋಜಿಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ವರಿಷ್ಠ ಕೆ. ಶಿವನ್ ಹೇಳಿದ್ದಾರೆ. ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಗಳನ್ನು ನಡೆಸಲು ಬಳಸಲು ಸಾಧ್ಯವಾಗಲಿರುವ 20 ಟನ್‌ಗಳ ಬಾಹ್ಯಾಕಾಶ ನಿಲ್ದಾಣವನ್ನು 2030ರಲ್ಲಿ ಆರಂಭಿಸುವ ಗುರಿಯನ್ನು ದೇಶ ಹೊಂದಿದೆ ಎಂದು ಅವರು ತಿಳಿಸಿದರು.

ಬಾಹ್ಯಾಕಾಶದಲ್ಲಿ ಗಗನ ಯಾತ್ರಿಗಳು 15ರಿಂದ 20 ದಿನಗಳ ಕಾಲ ವಾಸ್ತವ್ಯ ಕಲ್ಪಿಸುವುದು ಈ ಬಾಹ್ಯಾಕಾಶ ನಿಲ್ದಾಣದ ಪ್ರಾಥಮಿಕ ಗುರಿ. ಮಾನವ ಸಹಿತ ಚೊಚ್ಚಲ ಬಾಹ್ಯಾಕಾಶ ಯಾತ್ರೆ 'ಗಗನ ಯಾನ'ದ ಬಳಿಕ ಈ ಯೋಜನೆಯ ನಿರ್ದಿಷ್ಟ ವಿವರ ಬಹಿರಂಗಗೊಳ್ಳಲಿದೆ. ಈ ಯೋಜನೆಗಾಗಿ ಇತರ ಯಾವುದೇ ದೇಶದೊಂದಿಗೆ ಸಹಯೋಗ ಮಾಡಿಕೊಳ್ಳುವುದಿಲ್ಲ. ಪ್ರಸ್ತುತ ಅಮೆರಿಕ, ರಶ್ಯ ಹಾಗೂ ಚೀನ ಬಾಹ್ಯಾಕಾಶ ನಿಲ್ದಾಣಗಳನ್ನು ಹೊಂದಿದೆ. ರಾಷ್ಟ್ರಗಳ ಒಕ್ಕೂಟ ಕೂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿದೆ ಎಂದು ಶಿವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News