ಸ್ಪೇನ್ ವಿರುದ್ಧ ಭಾರತಕ್ಕೆ ಸೋಲು

Update: 2019-06-13 18:35 GMT

  ನಿತ ಹಾಕಿಟೂರ್ನಮೆಂಟ್ ಮ್ಯಾಡ್ರಿಡ್, ಜ.13: ಎಂಟು ರಾಷ್ಟ್ರಗಳ ಅಂಡರ್-21 ಆಹ್ವಾನಿತ ಟೂರ್ನಮೆಂಟ್‌ನಲ್ಲಿ ಸ್ಪೇನ್ ವಿರುದ್ಧ ಭಾರತದ ಪುರುಷರ ಜೂನಿಯರ್ ಹಾಕಿ ತಂಡ 1-3 ಅಂತರದಲ್ಲಿ ಸೋಲು ಅನುಭವಿಸಿದೆ.

ಇದರೊಂದಿಗೆ ಸ್ಪೇನ್ ಸತತ ಎರಡನೇ ಗೆಲುವು ದಾಖಲಿಸಿದೆ.

ಭಾರತ ಪಂದ್ಯದ ಪ್ರಥಮ ಕ್ವಾರ್ಟರ್‌ನಲ್ಲಿ ಮೇಲುಗೈ ಸಾಧಿಸಿತ್ತು. ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಉಭಯ ತಂಡದಿಂದಲೂ ಗೋಲು ಬರಲಿಲ್ಲ.

ಮೂರನೇ ಕ್ವಾರ್ಟರ್‌ನಲ್ಲಿ ಭಾರತ ಮತ್ತು ಸ್ಪೇನ್ ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಪ್ರತಾಪ್ ಲಕ್ರಾ ಪೆನಾಲ್ಟಿ ಅವಕಾಶದಲ್ಲಿ ಭಾರತದ ಖಾತೆಗೆ ಗೋಲು ಜಮೆ ಮಾಡಿದರು.

 ಸ್ಪೇನ್ 35ನೇ ನಿಮಿಷದಲ್ಲಿ ತಿರುಗೇಟು ನೀಡಿತು. ಇಗ್ನಾಸಿಯೊ ಕೊಬೊಸ್ ಗೋಲು ಜಮೆ ಮಾಡಿದರು. 37ನೇ ಸೀಸರ್ ಕ್ಯುಸಿಯರ್ ಮತ್ತು 39ನೇ ನಿಮಿಷದಲ್ಲಿ ಗೊಂಝಾಲೊ ಕ್ಯುಜಾನೊ ಗೋಲು ಬಾರಿಸಿದರು. ಇದರೊಂದಿಗೆ 3-1 ಮುನ್ನಡೆ ಸಾಧಿಸಿದ ಸ್ಪೇನ್ ಅಂತಿಮವಾಗಿ ಗೆಲುವಿನ ನಗೆ ಬೀರಿತು. ಶನಿವಾರ ಅಸ್ತ್ರಿಯಾವನ್ನು ಭಾರತ ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News