ಗೇಲ್ ಇಂಗ್ಲೆಂಡ್ ವಿರುದ್ಧ ಗರಿಷ್ಠ ಸ್ಕೋರ್

Update: 2019-06-14 18:39 GMT

 ಸೌತಾಂಪ್ಟನ್, ಜೂ.14: ವೆಸ್ಟ್‌ಇಂಡೀಸ್‌ನ ಸ್ಫೋಟಕ ದಾಂಡಿಗ ಕ್ರಿಸ್ ಗೇಲ್ ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲೆ ಬರೆದಿದ್ದಾರೆ.

ಇಂದು ವಿಶ್ವಕಪ್ ಪಂದ್ಯದಲ್ಲಿ ಗಳಿಸಿದ್ದು 36 ರನ್ ಆಗಿದ್ದರೂ, ಅವರು ಹಲವು ಆಟಗಾರರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ್ದಾರೆ.

 ಗೇಲ್ 36 ಪಂದ್ಯಗಳಲ್ಲಿ 1,632 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ ದಾಖಲೆ ಬರೆದಿದ್ದಾರೆ.

  39ರ ಹರೆಯದ ಎಡಗೈ ದಾಂಡಿಗ ಗೇಲ್ ಈ ಬಾರಿ ವರ್ಲ್ಡ್‌ಕಪ್ ಆಡಲು ಬರುವುದಕ್ಕಿಂತ ಮೊದಲು ಅವರ ಖಾತೆಯಲ್ಲಿ 1,525 ರನ್ ಜಮೆ ಆಗಿತ್ತು. ಅವರು ಇದೀಗ ಶ್ರೀಲಂಕಾದ ಕುಮಾರ ಸಂಗಕ್ಕರ ದಾಖಲೆಯನ್ನು ಮುರಿದಿದ್ದಾರೆ. ಸಂಗಕ್ಕರ 44 ಪಂದ್ಯಗಳಲ್ಲಿ 1,625 ರನ್ ಮಾಡಿದ್ದಾರೆ.

  ಕ್ರಿಸ್ ವೋಕ್ಸ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಗೇಲ್ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ವಿಂಡೀಸ್‌ನ ವಿವಿಯನ್ ರಿಚರ್ಡ್ಸ್ 1,619 ರನ್ ಗಳಿಸಿದ್ದಾರೆ. ಆ ಬಳಿಕದ ಸ್ಥಾನವನ್ನು ರಿಕಿ ಪಾಂಟಿಂಗ್ ಮತ್ತು ಮಹೇಲಾ ಜಯವರ್ಧನ ಪಡೆದಿದ್ದಾರೆ.

ಗೇಲ್ 41 ಎಸೆತಗಳಲ್ಲಿ 5ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 36 ರನ್ ಗಳಿಸಿ ಪ್ಲೆಂಕಟ್ ಓವರ್‌ನಲ್ಲಿ ಜೋನ್ ಬೈರ್‌ಸ್ಟೋವ್‌ಗೆ ಕ್ಯಾಚ್ ನೀಡಿದರು.

ಗೇಲ್ ಮೊದಲ 15 ಎಸೆತಗಳನ್ನು ಎದುರಿಸಿ 1ರನ್ ಮಾಡಿದ್ದರು. ಜೋಫ್ರಾ ಆರ್ಚರ್ ಅವರ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಗೇಲ್ ಗುಡುಗಲು ಆರಂಭಿಸಿದ್ದರು. 7ನೇ ಓವರ್‌ನಲ್ಲಿ 15 ರನ್ ಕಬಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News