ಹದಿನೇಳು ಸಿಕ್ಸರ್‌ಗಳ ವಿಶ್ವ ದಾಖಲೆ

Update: 2019-06-18 18:49 GMT

   ಮ್ಯಾಂಚೆಸ್ಟರ್, ಜೂ.18: ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಇನಿಂಗ್ಸ್‌ವೊಂದರಲ್ಲಿ 17 ಸಿಕ್ಸರ್‌ಗಳನ್ನು ಸಿಡಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ವಿಶ್ವ ದಾಖಲೆ ನಿರ್ಮಿಸಿದರು. ಅಫ್ಘಾನಿಸ್ತಾನ ವಿರುದ್ಧ ಮಂಗಳವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಕೇವಲ 57 ಎಸೆತಗಳಲ್ಲಿ 13ನೇ ಶತಕ ಪೂರೈಸಿದ ಮೊರ್ಗನ್ ಈ ಸಾಧನೆ ಮಾಡಿದರು. ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ವೇಗದ ಶತಕ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಹಾಗೂ ವಿಶ್ವದ ನಾಲ್ಕನೇ ಆಟಗಾರನೆಂಬ ಕೀರ್ತಿಗೆ ಭಾಜನರಾದರು. 71 ಎಸೆತಗಳನ್ನು ಎದುರಿಸಿದ ಮೊರ್ಗನ್ 148 ರನ್ ಗಳಿಸಿ ಔಟಾದರು. ಭಾರತದ ರೋಹಿತ್ ಶರ್ಮಾ(2013 ಆಸೀಸ್ ವಿರುದ್ಧ), ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್(2015 ಝಿಂಬಾಬ್ವೆ ವಿರುದ್ಧ) ಹಾಗೂ ದ.ಆಫ್ರಿಕದ ಎಬಿ ಡಿವಿಲಿಯರ್ಸ್(2015 ವಿಂಡೀಸ್ ವಿರುದ್ಧ) ಏಕದಿನ ಅಂತರ್‌ರಾಷ್ಟ್ರೀಯ ಇನಿಂಗ್ಸ್‌ನಲ್ಲಿ ತಲಾ 16 ಸಿಕ್ಸರ್‌ಗಳನ್ನು ಸಿಡಿಸಿದ್ದು, ಇದು ಇನಿಂಗ್ಸ್‌ವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್ ದಾಖಲೆಯಾಗಿತ್ತು.

ಮೊರ್ಗನ್ ಕೇವಲ ಸಿಕ್ಸರ್‌ಗಳ ಮೂಲಕವೇ ನೂರಕ್ಕೂ ಅಧಿಕ ರನ್ ಗಳಿಸಿದರು. ಅವರ ಇನಿಂಗ್ಸ್ ನಲ್ಲಿ ನಾಲ್ಕು ಬೌಂಡರಿ ಕೂಡ ಇವೆ. ಮೊರ್ಗನ್ 17ನೇ ಸಿಕ್ಸ್ ಸಿಡಿಸಿದ ಬೆನ್ನಿಗೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News