ಸ್ಪೀಕರ್ ಓಂ ಬಿರ್ಲಾರ ಆರೆಸ್ಸೆಸ್ ನಂಟು, ಬಾಬರಿ ದ್ವಂಸಕ್ಕೆ ಸಂಬಂಧಿಸಿ ಬಂಧನದ ಮಾಹಿತಿ ಡಿಲಿಟ್

Update: 2019-06-24 08:52 GMT

ಹೊಸದಿಲ್ಲಿ, ಜೂ.24: ಕೋಟ-ಬುಂಡಿ ಕ್ಷೇತ್ರದ ಸಂಸದ ಓಂ ಬಿರ್ಲಾ ಅವರನ್ನು ಲೋಕಸಭಾ ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿದಾಗ  ಆಡಳಿತ ಪಕ್ಷದ ಸಂಸದರು ಸಹಿತ ಹಲವರಿಗೆ ಅಚ್ಚರಿಯಾಗಿತ್ತು. ಆದರೆ ಇನ್ನೂ ಅಚ್ಚರಿಯ ವಿಚಾರವೆಂದರೆ, ಲೋಕಸಭಾ ವೆಬ್ ತಾಣವನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಲೋಕಸಭಾ ಸೆಕ್ರಟೇರಿಯಟ್, ಓಂ ಬಿರ್ಲಾ ಅವರಿಗಿರುವ ಆರೆಸ್ಸೆಸ್ ನಂಟು ಹಾಗೂ ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿ ಜೈಲುವಾಸದ ಕುರಿತಾದ ಮಾಹಿತಿಯಿರುವ ಭಾಗವನ್ನು ಅವರ ವ್ಯಕ್ತಿ ಪರಿಚಯದಿಂದ ತೆಗೆದು ಹಾಕಿದೆ ಎಂದು nationalheraldindia.com ವರದಿ ಮಾಡಿದೆ.

ಹಿಂದೆ ಲೋಕಸಭಾ ವೆಬ್ ಸೈಟ್ ನಲ್ಲಿದ್ದ ಓಂ ಬಿರ್ಲಾ ಅವರ ವ್ಯಕ್ತಿ ಪರಿಚಯದಲ್ಲಿ ಆರೆಸ್ಸೆಸ್ ಜತೆಗಿನ ಅವರ ಸಂಬಂಧದ ಕುರಿತು ಸ್ಪಷ್ಟ ಉಲ್ಲೇಖವಿತ್ತು. ಅವರು ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಮಾಹಿತಿ ಕೂಡ ಇತ್ತಾದರೂ ಎರಡೂ ಮಾಹಿತಿ ಈಗಿನ ಅವರ ವ್ಯಕ್ತಿ ಪರಿಚಯದಲ್ಲಿಲ್ಲ.

ಈಗ ಲೋಕಸಭಾ ವೆಬ್ ತಾಣದಲ್ಲಿ ಕಾಣಿಸುವ ಬಿರ್ಲಾ ಅವರ ವ್ಯಕ್ತಿ ಪರಿಚಯದಲ್ಲಿ ಅವರು ಸಂಸದರಾಗಿ ನಡೆಸಿರುವ ಒಳ್ಳೆಯ ಹಾಗೂ ಮಾನವೀಯ ಕೈಂಕರ್ಯಗಳ ಬಗ್ಗೆ ಮಾತ್ರ ಹೇಳಲಾಗಿದೆ.

ಬಿರ್ಲಾ ಅವರು ಮೋದಿಗೆ ಆಪ್ತರಾದವರು ಎಂಬ ಕಾರಣದಿಂದಲೂ ಅವರನ್ನು ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಮೇಲಾಗಿ ಆಡಳಿತ ಪಕ್ಷಕ್ಕೆ ಲೋಕಸಭೆಯನ್ನು ಅದರ ಯೋಜನೆಗೆ ತಕ್ಕಂತೆ ನಡೆಸುವ ಸ್ಪೀಕರ್ ಬೇಕಿದೆಯೇ ಹೊರತು ನಿಯಮದಂತೆ ಕಾರ್ಯಾಚರಿಸುವ ಸ್ಪೀಕರ್ ಅಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News