ವಿದೇಶಾಂಗ ಸಚಿವ ಎಸ್.ಜೈಶಂಕರ್ ಬಿಜೆಪಿಗೆ ಅಧಿಕೃತ ಸೇರ್ಪಡೆ

Update: 2019-06-24 16:09 GMT

  ಹೊಸದಿಲ್ಲಿ, ಜೂ. 24: ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಹ್ಮಣ್ಯನ್ ಜೈಶಂಕರ್ ಸೋಮವಾರ ಸಂಸತ್ ಸದನದಲ್ಲಿ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ ಬಿಜೆಪಿ ಸೇರಿದರು.

ಭಾರತದ ನೂತನ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಜೂನ್ 2ರಂದು ಅಧಿಕಾರ ಸ್ವೀಕರಿಸಿರುವ ಸುಬ್ರಹ್ಮಣ್ಯನ್ ಜೈಶಂಕರ್, ಅವರ ಪೂರ್ವಾಧಿಕಾರಿ ಸುಷ್ಮಾ ಸ್ವರಾಜ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

''ಹಾರೈಸಿರುವುದಕ್ಕೆ ಎಲ್ಲರಿಗೂ ವಂದನೆ. ಈ ಜವಾಬ್ದಾರಿ ನೀಡಿರುವುದು ಗೌರವದ ವಿಷಯ. ಸುಷ್ಮಾ ಸ್ವರಾಜ್ ಅವರ ಹೆಜ್ಜೆ ಹಾದಿ ಅನುಸರಿಸಲು ಹೆಮ್ಮೆ ಪಡುತ್ತೇನೆ,'' ಎಂದು ಸುಬ್ರಹ್ಮಣ್ಯನ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನಿಯೋಜಿತರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಹಲವು ರಾಷ್ಟ್ರಗಳ ವಿದೇಶಾಂಗ ಸಚಿವರಿಗೆ ಅವರು ವಂದನೆ ಸಲ್ಲಿಸಿದ್ದಾರೆ. ನರೇಂದ್ರ ಮೋದಿ ಅವರ ಎರಡನೇ ಅಧಿಕಾರವಧಿಯಲ್ಲಿ ಸಂಪುಟದಿಂದ ಹೊರಗುಳಿದಿರುವ ಸುಷ್ಮಾ ಸ್ವರಾಜ್ ಅವರ ಉತ್ತರಾಧಿಕಾರಿಯಾಗಿ ಮಾಜಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸುಬ್ರಹ್ಮಣ್ಯನ್ ಜೈಶಂಕರ್ ಶುಕ್ರವಾರ ನಿಯೋಜನೆಯಾಗಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಆಯ್ಕೆಯಾಗುತ್ತಿರುವ ಎರಡನೇ ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಬ್ರಹ್ಮಣ್ಯನ್ ಜೈಶಂಕರ್. ಈ ಮೊದಲು 2004ರಲ್ಲಿ ಯುಪಿಎ ಸರಕಾರದ ಮೊದಲ ಅಧಿಕಾರವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ನಟವರ ಸಿಂಗ್ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News