ರಸೆಲ್ ವಿಶ್ವಕಪ್‌ನಿಂದ ಹೊರಕ್ಕೆ

Update: 2019-06-24 18:35 GMT

  ಲಂಡನ್, ಜೂ.24: ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಮಂಡಿನೋವಿನಿಂದಾಗಿ ತಂಡದಿಂದ ಹಿಂದೆ ಸರಿದಿದ್ದು, ವಿಶ್ವಕಪ್ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಂದು ಸೋಮವಾರ ಐಸಿಸಿ ತಿಳಿಸಿದೆ. ರಸೆಲ್ ಟೂರ್ನಿಯಲ್ಲಿ 4 ಪಂದ್ಯಗಳಲ್ಲಿ ಆಡಿದ್ದರು. ಆದರೆ, ಶನಿವಾರ ನ್ಯೂಝಿಲ್ಯಾಂಡ್ ವಿರುದ್ಧದ 5 ರನ್‌ನಿಂದ ಸೋತ ಪಂದ್ಯದಲ್ಲಿ ಆಡಿರಲಿಲ್ಲ. ಕಳೆದ ತಿಂಗಳು ಐರ್ಲೆಂಡ್ ವಿರುದ್ಧ 126 ಎಸೆತಗಳಲ್ಲಿ 148 ರನ್ ಗಳಿಸಿ ಗಮನ ಸೆಳೆದಿದ್ದ ಸುನೀಲ್ ಆ್ಯಂಬ್ರಿಸ್ 15 ಸದಸ್ಯರ ವಿಂಡೀಸ್ ತಂಡಕ್ಕೆ ರಸೆಲ್ ಬದಲಿಗೆ ಆಯ್ಕೆಯಾಗಿದ್ದಾರೆ.

ವಿಂಡೀಸ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಸೆಮಿಫೈನಲ್ ರೇಸ್‌ನಲ್ಲಿರಲು ಇನ್ನುಳಿದ 3 ಪಂದ್ಯಗಳನ್ನೂ ಗೆಲ್ಲಬೇಕಾಗಿದೆ.

ಜೇಸನ್ ಹೋಲ್ಡರ್ ನೇತೃತ್ವದ ವಿಂಡೀಸ್ ಗುರುವಾರ ಭಾರತ ತಂಡದ ಸವಾಲು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News