ಅರ್ಜೆಂಟೀನ ಅಂತಿಮ-8ರ ಹಂತಕ್ಕೆ ಪ್ರವೇಶ

Update: 2019-06-24 18:36 GMT

 ದೋಹ, ಜೂ.24: ಲೌಟಾರೊ ಮಾರ್ಟಿನೆಝ್‌ರ ಆರಂಭಿಕ ಗೋಲು ಹಾಗೂ ಸೆರ್ಗಿಯೊ ಅಗುರೊ ಅವರ ದ್ವಿತೀಯಾರ್ಧದ ಅಂತ್ಯದಲ್ಲಿ ಗಳಿಸಿದ ಗೋಲು ನೆರವಿನಿಂದ ಅರ್ಜೆಂಟೀನ ತಂಡ ಖತರ್ ವಿರುದ್ಧದ ಕೊಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದೆ.

ಖತರ್ ವಿರುದ್ಧ ರವಿವಾರ 2-0 ಅಂತರದ ಗೆಲುವು ದಾಖಲಿಸಿರುವ ಅರ್ಜೆಂಟೀನ ಮುಂದಿನ ಸುತ್ತಿನಲ್ಲಿ ವೆನೆಝುವೆಲಾ ತಂಡವನ್ನು ಎದುರಿಸಲಿದೆ.

ಅರ್ಜೆಂಟೀನ ಆಟ ಆರಂಭವಾಗಿ 4ನೇ ನಿಮಿಷದಲ್ಲಿ 1-0 ಮುನ್ನಡೆ ಸಾಧಿಸಿತು. ಆಟ ಕೊನೆಗೊಳ್ಳಲು 8 ನಿಮಿಷ ಬಾಕಿ ಇರುವಾಗ 82ನೇ ನಿಮಿಷದಲ್ಲಿ ಅಗುರೆ ಅರ್ಜೆಂಟೀನದ ಪರ ಮತ್ತೊಂದು ಗೋಲು ಗಳಿಸಿದರು.

ಕೊಲಂಬಿಯಾ ವಿರುದ್ಧ ಸೋತು ಹಾಗೂ ಪರಾಗ್ವೆ ವಿರುದ್ಧ ಡ್ರಾ ಸಾಧಿಸಿರುವ ಅರ್ಜೆಂಟೀನಕ್ಕೆ ಇದು ಟೂರ್ನಿಯ ಮೊದಲ ಗೆಲುವಾಗಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯ ‘ಬಿ’ ಗುಂಪಿನಲ್ಲಿ 4 ಅಂಕ ಗಳಿಸಿ ಎರಡನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿರುವ ಕೊಲಂಬಿಯಾಗಿಂತ 4 ಅಂಕಗಳಿಂದ ಹಿಂದಿದೆ. ಅರ್ಜೆಂಟೀನ ಶುಕ್ರವಾರ ರಿಯೋ ಡಿಜನೈರೊದಲ್ಲಿ ವೆನೆಝುವೆಲಾ ತಂಡವನ್ನು ಎದುರಿಸಲಿದೆ. ಪ್ರತಿ ಗುಂಪಿನ 2 ಅಗ್ರ ತಂಡಗಳು ಎರಡು ಉತ್ತಮ ಮೂರನೇ ಸ್ಥಾನದ ತಂಡಗಳೊಂದಿಗೆ ನಾಕೌಟ್ ಹಂತಕ್ಕೇರಲಿವೆ. ಬ್ರೆಝಿಲ್ ಹಾಗೂ ವೆನೆಝುವೆಲಾ ‘ಎ’ ಗುಂಪಿನಿಂದ ಅರ್ಹತೆ ಪಡೆದರೆ, ಮೂರನೇ ಸ್ಥಾನ ಪಡೆದಿರುವ ಪೆರು ಈ ಎರಡು ತಂಡಗಳೊಂದಿಗೆ ಸೇರ್ಪಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News