ನೆಟ್ ಅಭ್ಯಾಸಕ್ಕೆ ಇಂಗ್ಲೆಂಡ್‌ಗೆ ಅರ್ಜುನ್ ತೆಂಡುಲ್ಕರ್ ನೆರವು

Update: 2019-06-24 18:44 GMT

ಲಂಡನ್, ಜೂ.24: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಅವರು ಆಸ್ಟ್ರೇಲಿಯದ ವಿರುದ್ಧ ವಿಶ್ವಕಪ್ ಪಂದ್ಯಕ್ಕೆ ಇಂಗ್ಲೆಂಡ್‌ಗೆ ತಯಾರಿ ನಡೆಸಲು ನೆಟ್‌ನಲ್ಲಿ ನೆರವಾಗಿದ್ದಾರೆ.

   ಆಸ್ಟ್ರೇಲಿಯವನ್ನು ಎದುರಿಸಲಿರುವ ಇಂಗ್ಲೆಂಡ್ ದಾಂಡಿಗರ ತಯಾರಿಗೆ ವೇಗದ ಬೌಲರ್ ಅರ್ಜುನ್ ನೆರವಾಗಿದ್ದಾರೆ. ಸ್ಪಿನ್ ಬೌಲಿಂಗ್ ತಜ್ಞ ಸಕ್ಲೈನ್ ಮಷ್ತ್ತಾಕ್ ಅವರ ಉಪಸ್ಥಿತಿಯಲ್ಲಿ ಅರ್ಜುನ್ ತೆಂಡುಲ್ಕರ್ ಇಂಗ್ಲೆಂಡ್‌ನ ಆಟಗಾರರ ತಯಾರಿಗೆ ಬೌಲಿಂಗ್ ನಡೆಸಿದ್ದಾರೆ. ಇಂಗ್ಲೆಂಡ್‌ನ ದಾಂಡಿಗರಿಗೆ ನೆಟ್ ಅಭ್ಯಾಸಕ್ಕೆ ಅರ್ಜುನ್ ತೆಂಡುಲ್ಕರ್ ನೆರವಾಗುತ್ತಿರುವುದು ಇದು ಮೊದಲಲ್ಲ. 2015ರಲ್ಲಿ ಅರ್ಜುನ್ ತೆಂಡುಲ್ಕರ್ ಇಂಗ್ಲೆಂಡ್‌ಗೆ ಎರಡನೇ ಆ್ಯಶಸ್ ಟೆಸ್ಟ್‌ನ ತಯಾರಿಗೆ ನೆರವು ನೀಡಿದ್ದರು.

ಆಗ ಅವರಿಗೆ 15ರ ಹರೆಯ. 19ರ ಹರೆಯದ ಅರ್ಜುನ್ ಇತ್ತೀಚೆಗೆ ಎಂಸಿಸಿ ಯಂಗ್ ಕ್ರಿಕೆಟ್ ತಂಡದ ಪರ ಆಡಿದ್ದರು. ಎದುರಾಳಿ ಸರ್ರೆ ಸೆಕೆಂಡ್ ಇಲೆವೆನ್ ತಂಡದ 2 ವಿಕೆಟ್‌ಗಳನ್ನು ಉಡಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News