ಐ.ಎಸ್.ಎಫ್.ನಿಂದ ಇಂಡಿಯಾ ಅಹೆಡ್ - 2019 ಮತ್ತು ಸವಾಲುಗಳು’ ಸಂವಾದ ಕಾರ್ಯಕ್ರಮ

Update: 2019-06-25 05:00 GMT

ದಮ್ಮಾಮ್‌, ಜೂ.25: ಇತ್ತೀಚೆಗಿನ ಮಹಾಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ "ಭಾರತದ ಭವಿಷ್ಯ ಮತ್ತು ಸವಾಲುಗಳು" ವಿಷಯದಲ್ಲಿ ಇಂಡಿಯನ್ ಸೋಶಿಯಲ್ ಫೋರಂ (ಐ.ಎಸ್.ಎಫ್.) ಈಸ್ಟರ್ನ್ ಪ್ರೊವಿನ್ಸ್ ಸೌದಿ‌ ಅರೇಬಿಯಾ ವತಿಯಿಂದ "ಇಂಡಿಯಾ ಅಹೆಡ್ - 2019 ಮತ್ತು ಸವಾಲುಗಳು" ಎಂಬ ಸಂವಾದ ಕಾರ್ಯಕ್ರಮವನ್ನು  ಜುಬೈಲ್, ಖೋಬರ್ ಮತ್ತು ದಮ್ಮಾಮ್ ನಲ್ಲಿ ಇತ್ತೀಚಿಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾರತದಲ್ಲಿ ಇತ್ತೀಚಿಗೆ ನಡೆದ 2019ರ ಸಾರ್ವತ್ರಿಕ ಚುನಾವಣೆಯ‌ ವಿಶ್ಲೇಷಣಾ ವರದಿಯನ್ನು ಮಂಡಿಸಿ, ಭಾರತದಲ್ಲಿ ನಡೆಯುತ್ತಿರುವ  ಕೋಮು ಧ್ರುವೀಕರಣ ರಾಜಕೀಯದ ಅಪಾಯದ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ಮೂಲಕ ಭಾರತದ ಭವಿಷ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. .

ಕಾರ್ಯಕ್ರಮವು ಐ.ಎಸ್.ಎಫ್. ಪೂರ್ವ ಪ್ರಾಂತ್ಯದ ಕರ್ನಾಟಕ ಘಟಕದ ಅಧ್ಯಕ್ಷ ಮುಹಮ್ಮದ್ ಶರೀಫ್  ಮತ್ತು‌ ಉಪಾಧ್ಯಕ್ಷ ಸಲಾವುದ್ದೀನ್ ತುಮಕೂರು ಉಪಸ್ಥಿತಿಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News