ಪಾಕ್ ತಂಡ ಭಾರತ ವಿರುದ್ಧ ಸೋತಾಗ ಆತ್ಮಹತ್ಯೆಗೆ ಯೋಚಿಸಿದ್ದರು ಕೋಚ್ ಅರ್ಥರ್!

Update: 2019-06-25 05:59 GMT

ಲಂಡನ್, ಜೂ.25: ಪಾಕಿಸ್ತಾನ ತಂಡ ವಿಶ್ವಕಪ್‌ನ ಗ್ರೂಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಸೋತಾಗ ನನಗೆ ತುಂಬಾ ನೋವಾಗಿತ್ತು. ಆಗ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯೋಚನೆಯನ್ನೂ ಮಾಡಿದ್ದೆ ಎಂದು ಪಾಕ್‌ನ ಪ್ರಧಾನ ಕೋಚ್ ಮಿಕಿ ಅರ್ಥರ್ ಹೇಳಿದ್ದಾರೆ.

ಜೂ.16 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ 89 ರನ್‌ಗಳಿಂದ ಭಾರತಕ್ಕೆ ಸೋತಿತ್ತು. ಆಗ ಪಾಕ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸೋಲಿನಿಂದ ಪಾಕ್‌ನ ಸೆಮಿ ಫೈನಲ್ ಹಾದಿ ದುರ್ಗಮವಾಗಿತ್ತು. ರವಿವಾರ ದ.ಆಫ್ರಿಕವನ್ನು ಮಣಿಸಿರುವ ಪಾಕ್ ತಂಡದ ಸೆಮಿ ಫೈನಲ್ ಆಸೆ ಮತ್ತೆ ಚಿಗುರಿದೆ. ‘‘ಕಳೆದ ರವಿವಾರ(ಜೂ.16)ನಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಭಾರತ ವಿರುದ್ಧ ಪಂದ್ಯ ಎಷ್ಟು ಮಹತ್ವದ್ದೆಂದು ಎಲ್ಲರಿಗೂ ಗೊತ್ತಿದೆ. ಇಂತಹ ಘಟನೆಗಳು ತಕ್ಷಣವೇ ನಡೆಯುತ್ತವೆ. ನೀವು ಒಂದು, ಮತ್ತೊಂದು ಪಂದ್ಯವನ್ನು ಸೋಲುತ್ತೀರಿ. ಇದು ವಿಶ್ವಕಪ್. ಮಾಧ್ಯಮಗಳ ಸೂಕ್ಷ್ಮ ದೃಷ್ಟಿ, ಜನರ ನಿರೀಕ್ಷೆ ಹೆಚ್ಚಾಗಿರುತ್ತದೆ’’ ಎಂದು ಅರ್ಥರ್ ಹೇಳಿದ್ದಾರೆ.

ದ.ಆಫ್ರಿಕದ ಅರ್ಥರ್ ಅವರ ಈ ಭಾವನಾತ್ಮಕ ಹೇಳಿಕೆ ಅವರು ತಮ್ಮ ಕೆಲಸದ ಮೇಲೆ ಎಷ್ಟು ಅಭಿಮಾನ ಹೊಂದಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಅರ್ಥರ್ ಈ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕೆಲವು ಪಾಕ್ ಅಭಿಮಾನಿಗಳು ಅವರು ಬಳಸಿರುವ ಪದ 2007ರ ವಿಶ್ವಕಪ್‌ನ ವೇಳೆ ಪಾಕಿಸ್ತಾನದ ಮಾಜಿ ಕೋಚ್ ಬಾಬ್ ವೂಲ್ಮರ್ ಸಹಜ ಸಾವಿಗೆ ಕೆಟ್ಟ ಅಭಿರುಚಿ ನೀಡಿದಂತಾಗಿದೆ ಎಂದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News