ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ

Update: 2019-06-25 11:00 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜೂ.25: ನೀತಿ ಆಯೋಗದ ಎರಡನೇ ಆರೋಗ್ಯ ಸೂಚ್ಯಂಕದಲ್ಲಿ ಆರೋಗ್ಯ ಕ್ಷೇತ್ರದ ಒಟ್ಟಾರೆ ನಿರ್ವಹಣೆಗಾಗಿ ಕೇರಳ ಅಗ್ರ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ಈ ಎರಡನೇ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ ನೀತಿ ಆಯೋಗವು 2015-16ರಿಂದ 2017-18 ಅವಧಿಯ ನಿರ್ವಹಣೆಯನ್ನು ಗಣನೆಗೆ ತೆಗೆದುಕೊಂಡಿದೆ. ಕೇರಳದ ನಂತರ ಎರಡನೇ ಸ್ಥಾನ ಆಂಧ್ರ ಪ್ರದೇಶಕ್ಕೆ ಹೋಗಿದ್ದರೆ, ಮೂರನೇ ಸ್ಥಾನ ಮಹಾರಾಷ್ಟ್ರಕ್ಕೆ ಸಂದಿದೆ. ಈ ಸೂಚ್ಯಂಕ ಸಿದ್ಧಪಡಿಸಲು ಒಟ್ಟು 23 ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಫೆಬ್ರವರಿ 2018ರಲ್ಲಿ ಬಿಡುಗಡೆಯಾಗಿದ್ದ ಮೊದಲ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2014-15ರಿಂದ 2015-16 ಅವಧಿಯ ನಿರ್ವಹಣೆಯನ್ನು ಪರಿಗಣಿಸಲಾಗಿತ್ತು.

 ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಹಾಗೂ ವಿಶ್ವ ಬ್ಯಾಂಕಿನ ತಾಂತ್ರಿಕ ಸಹಾಯದೊಂದಿಗೆ ವರದಿ ಸಿದ್ಧಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News