×
Ad

ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಸಿದ್ಧ: ಶ್ರೀರಾಮುಲು

Update: 2019-06-25 18:57 IST

ಬೆಂಗಳೂರು, ಜೂ.25: ಮೀಸಲಾತಿ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರೆಯಲಿದ್ದು, ಇದಕ್ಕಾಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ ಎಂದು ಶಾಸಕ ಶ್ರೀರಾಮುಲು ಹೇಳಿದರು.

ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಚಳುವಳಿ ಬೆಂಬಲಿಸಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಕೊಟ್ಟ ಭಿಕ್ಷೆಯಿಂದ ನಾವು ರಾಜಕಾರಣದಲ್ಲಿದ್ದೇವೆ. ನಾವು ಈ ಸ್ಥಾನದಲ್ಲಿರಲು ಸ್ವಾಮೀಜಿಗಳು ಕಾರಣರಾಗಿದ್ದಾರೆ. ಸ್ವಾಮೀಜಿಗಳ ಆಶೀರ್ವಾದದಿಂದ ನಾವು ಇಂದು ಇಲ್ಲಿದ್ದು, ಈ ಜೀವನದಲ್ಲಿ ಯಾವುದು ಶಾಶ್ವತವಲ್ಲ. ತಮ್ಮ ಬೇಡಿಕೆಗಳಿಗೆ ಸ್ವಾಮೀಜಿ ಒಪ್ಪಿದರೆ ಈಗಲೇ ಈ ವೇದಿಕೆಯಲ್ಲೇ ರಾಜೀನಾಮೆ ನೀಡಲಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News