ಬಿಬಿಎಂಪಿ ನೌಕರರ ಸಂಘದಲ್ಲಿ 8.42 ಕೋಟಿ ರೂ.ಅವ್ಯವಹಾರ ಆರೋಪ: ತನಿಖೆಗೆ ಒತ್ತಾಯ

Update: 2019-06-25 16:01 GMT

ಬೆಂಗಳೂರು, ಜೂ.25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಹಕಾರ ಸಂಘದಲ್ಲಿ 8.42 ಕೋಟಿ ರೂ.ಅವ್ಯವಹಾರ ನಡೆದಿದ್ದು ಈ ಸಂಬಂಧ ಸರಕಾರ ಮಧ್ಯಪ್ರವೇಶ ಮಾಡಿ, ಪ್ರಕರಣವನ್ನು ವಿಶೇಷ ತನಿಖಾ ದಳ ಅಥವಾ ಸಿಒಡಿಗೆ ಒಪ್ಪಿಸಬೇಕು ಎಂದು ಸಂಘದ ನಿರ್ದೇಶಕ ಬಾಬು ಒತ್ತಾಯಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಸಹಕಾರ ಇಲಾಖೆಯ ಮೊರೆ ಹೋಗಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸಹಕಾರ ಸಂಘದ ಆಡಳಿತ ಮಂಡಳಿ ಕಾನೂನು ಬಾಹಿರವಾಗಿ ಸಾಲ ನೀಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಆಡಿಟ್ ವರದಿಯಲ್ಲಿ ಗಮನಕ್ಕೆ ಬಂದಿದೆ. ಸಾಲ ವಸೂಲಾತಿ ಬಗ್ಗೆ ಕೂಡ ಯಾವುದೇ ರೀತಿಯ ಕ್ರಮಗೈಕೊಳ್ಳಲಾಗಿಲ್ಲ. ಆಡಳಿತ ಮಂಡಳಿಯ ಕೆಲವು ತಪ್ಪು ತೀರ್ಮಾನದಿಂದಾಗಿ ಸಂಘಕ್ಕೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಟೀಕಿಸಿದರು.

ಸಂಘದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸದಸ್ಯರಿದ್ದರು, ಆ ಹಿನ್ನೆಲೆಯಲ್ಲಿ ಸರಕಾರ ಇವರೆಲ್ಲರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News