ಚುನಾವಣೆ ಸಂದರ್ಭ ಬಿಜೆಪಿಯ ಐಟಿ ಸೆಲ್ ನಂತೆ ಕೆಲಸ ಮಾಡಿದ್ದ ಫೇಸ್ ಬುಕ್

Update: 2019-06-26 15:03 GMT

ಕೋಲ್ಕತಾ, ಜೂ.26: ಸಾರ್ವತ್ರಿಕ ಚುನಾವಣೆಯ ಸಂದರ್ಭ ಬಿಜೆಪಿಗೆ ವಿರುದ್ಧವಾಗಿರುವ ವಿಷಯಗಳನ್ನು ಬ್ಲಾಕ್ ಮಾಡುವ ಮೂಲಕ ಫೇಸ್‌ಬುಕ್ ಬಿಜೆಪಿಗೆ ನೆರವಾಗಿದೆ ಎಂದು ಟಿಂಎಸಿ ಸಂಸದ ಡೆರೆಕ್ ಒ’ಬ್ರಿಯಾನ್ ಆರೋಪಿಸಿದ್ದಾರೆ.

“ಭಾರತದಲ್ಲಿ ಫೇಸ್‌ಬುಕ್‌ನ ಹಿರಿಯ ವ್ಯವಸ್ಥಾಪಕರು ವಾಸ್ತವದಲ್ಲಿ ಬಿಜೆಪಿಯ ಪ್ರಚಾರ ವ್ಯವಸ್ಥಾಪಕರಂತಿದ್ದರು. ಫೇಸ್‌ಬುಕ್‌ನ ದಿಲ್ಲಿ ಕಚೇರಿಯು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದಂತೆ ಕೆಲಸ ಮಾಡುತ್ತಿತ್ತು. ಬಿಜೆಪಿ ವಿರೋಧಿ ನೀತಿಯನ್ನು ಸೆನ್ಸಾರ್ ಮಾಡಿ ಪ್ರಸಾರ ಮಾಡುತ್ತಿದ್ದರೆ ಇತರ ಪಕ್ಷಗಳಿಗೆ ಹಾನಿಯಾಗುವ ರೀತಿಯಲ್ಲಿ ಸುದ್ದಿ ಪ್ರಸಾರವಾಗುತ್ತಿತ್ತು. ನನ್ನ ಹೇಳಿಕೆಗಳಿಗೆ ನಾನೇ ಸಂಪೂರ್ಣ ಜವಾಬ್ದಾರಿ ಹೊರುತ್ತೇನೆ” ಎಂದು ಒ’ಬ್ರಿಯಾನ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ವಾಟ್ಸಾಪ್ ಕೂಡಾ ಹೊಂದಾಣಿಕೆ ಮಾಡಿಕೊಂಡಿತ್ತು. 2018ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ‘ ಸಿಹಿ ಅಥವಾ ಕಹಿ ಸುದ್ದಿ ಸತ್ಯ ಅಥವಾ ನಕಲಿ ಸುದ್ದಿ, ಹೀಗೆ ಯಾವ ಸುದ್ದಿಯನ್ನೇ ಆಗಲಿ ನಾವು ಬಯಸಿದಂತೆ ಸುದ್ದಿ ಪ್ರಸಾರ ಮಾಡುವ ಸಾಮರ್ಥ್ಯ ನಮಗಿದೆ. ಯಾಕೆಂದರೆ ನಮ್ಮಲ್ಲಿ 35 ವಾಟ್ಸಾಪ್ ಗ್ರೂಪ್ ಗಳಿವೆ’ ಎಂದು ಹೇಳಿಕೆ ನೀಡಿರುವುದನ್ನು ಒ’ಬ್ರಿಯಾನ್ ಉಲ್ಲೇಖಿಸಿದ್ದಾರೆ. ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾರ್ಪಣೆ ಸಲ್ಲಿಸುವ ನಿರ್ಣಯದಲ್ಲಿ ಮಾತನಾಡಿದ ಒ’ಬ್ರಿಯಾನ್, ಮುಖ್ಯ ಚುನಾವಣಾಧಿಕಾರಿಯನ್ನು ಆಯ್ಕೆ ಮಾಡಲು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವಿಷಯದಲ್ಲಿ ಹಾಗೂ ಬ್ಯಾಲಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮರಳಿ ಜಾರಿಗೊಳಿಸಲು ಒಂದು ಕೊಲಿಜಿಯಂ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News