ದ.ಆಫ್ರಿಕದ ವಿಶ್ವಕಪ್ ದಾಖಲೆ ಸರಿಗಟ್ಟಿದ ನ್ಯೂಝಿಲ್ಯಾಂಡ್

Update: 2019-06-26 19:02 GMT

ಬರ್ಮಿಂಗ್‌ಹ್ಯಾಮ್, ಜೂ.26: ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕ ಹೆಸರಲ್ಲಿರುವ 20 ವರ್ಷಗಳ ಹಳೆಯ ವಿಶ್ವಕಪ್ ದಾಖಲೆಯೊಂದನ್ನು ಸರಿಗಟ್ಟಿದೆ.

 1999ರ ವಿಶ್ವಕಪ್ ಟೂರ್ನಿಯಲ್ಲಿ ದಿವಂಗತ ಹ್ಯಾನ್ಸಿ ಕ್ರೋನಿಯೆ ನೇತೃತ್ವದ ದ.ಆಫ್ರಿಕ ತಂಡ ಸತತ ಆರು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. 2019ರ ವಿಶ್ವಕಪ್ ಟೂರ್ನಿಯಲ್ಲಿ ವಿಲಿಯಮ್ಸನ್ ನಾಯಕತ್ವದ ನ್ಯೂಝಿಲ್ಯಾಂಡ್ ಸತತ ಆರನೇ ಪಂದ್ಯದಲ್ಲಿ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ 20 ವರ್ಷದ ಹಳೆಯ ದಾಖಲೆಯೊಂದನ್ನು ಸರಿಗಟ್ಟಿತು. ಪಾಕಿಸ್ತಾನ ವಿರುದ್ಧ ಬುಧವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಕಿವೀಸ್ ಈ ಅಪೂರ್ವ ಸಾಧನೆ ಮಾಡಿತು.

1999ರಲ್ಲಿ ನಡೆದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ದ.ಆಫ್ರಿಕ ತಂಡ ಆಸ್ಟ್ರೇಲಿಯ ವಿರುದ್ಧ ಆಘಾತಕಾರಿ ಫಲಿತಾಂಶ ಪಡೆದಿತ್ತು. ಆಫ್ರಿಕ ಪಂದ್ಯ ಟೈ ಗೊಳಿಸಿದ್ದರೂ ಸೂಪರ್-6ರ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿದ್ದ ಕಾರಣ ಫೈನಲ್‌ಗೆ ತೇರ್ಗಡೆಯಾಗಲು ವಿಫಲವಾಗಿತ್ತು.

1999ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕ ತಂಡ ಸತತ 6 ಪಂದ್ಯಗಳಲ್ಲಿ ಆಡುವ-11ರ ಬಳಗದಲ್ಲಿ ಬದಲಾವಣೆ ಮಾಡಿರಲಿಲ್ಲ. ಅತ್ಯಂತ ಹೆಚ್ಚು ಒತ್ತಡವಿರುವ ವಿಶ್ವಕಪ್‌ನಲ್ಲಿ ಹೆಚ್ಚಿನ ತಂಡಗಳು ಸಾಮಾನ್ಯವಾಗಿ ಆಡುವ ಬಳಗದಲ್ಲಿ ಬದಲಾವಣೆ ಮಾಡುತ್ತಿರುತ್ತವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News