ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟವನ್ನು ಅಮಾನತುಗೊಳಿಸಿದ ಐಒಸಿ

Update: 2019-06-26 19:04 GMT

ಲೋಝನ್, ಜೂ.26: ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ(ಎಐಬಿಎ)ವನ್ನು ಬುಧವಾರ ಅಮಾನತುಗೊಳಿಸಿರುವ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬಾಕ್ಸಿಂಗ್ ಕ್ವಾಲಿಫಿಕೇಶನ್ ಹಾಗೂ ಸ್ಪರ್ಧೆಯನ್ನು ಅಧಿಕೃತವಾಗಿ ನಡೆಸಲಿದೆ. ಹಣಕಾಸು ಹಾಗೂ ಆಡಳಿತ ವಿಷಯಕ್ಕೆ ಸಂಬಂಧಿಸಿ ಸಮಸ್ಯೆ ಎದುರಿಸುತ್ತಿರುವ ಎಐಬಿಎಯನ್ನು ಸಮಸ್ಯೆ ಇತ್ಯರ್ಥವಾಗುವ ತನಕ ಅಮಾನತಿನಲ್ಲಿಡುವ ಶಿಫಾರಸನ್ನು ಒಮ್ಮತದಿಂದ ಅನುಷ್ಠಾನಕ್ಕೆ ತರಲು ಐಒಸಿ ತನ್ನ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ನಿರ್ಧರಿಸಿತ್ತು.

ಎಐಬಿಎ ಕಳೆದ ಕೆಲವು ವರ್ಷಗಳಿಂದ ತನ್ನ ಹಣಕಾಸು ವ್ಯವಹಾರ ಹಾಗೂ ಆಡಳಿತ ವಿಚಾರಕ್ಕೆ ಸಂಬಂಧಿಸಿ ಬಿಕ್ಕಟ್ಟು ಎದುರಿಸುತ್ತಿದ್ದು, 16 ಬಿಲಿಯನ್ ಡಾಲರ್ ಸಾಲದ ಹೊರೆ ಎದುರಿಸುತ್ತಿದೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಮಂಡಳಿಯು ಆಂತರಿಕವಾಗಿ ಒಡೆದುಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News