20ರ ಸಂಭ್ರಮದಲ್ಲಿರುವ ಡಿ.ಕೆ.ಎಸ್.ಸಿ. ಸಂಸ್ಥೆ: ನ.8ರಂದು ದುಬೈಯಲ್ಲಿ ಸಮಾರಂಭ

Update: 2019-06-29 07:56 GMT

ದುಬೈ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಎಸ್ ಸಿ) ಯುಎಇಯಲ್ಲಿ ತನ್ನ 20 ವರ್ಷ ಗಳನ್ನು ಪೂರೈಸುವ ಸಲುವಾಗಿ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದು, ನ.8ರಂದು ದುಬೈಯಲ್ಲಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದೆ.

ಈ ಸಮಾರಂಭದಲ್ಲಿ ಡಿಕೆಎಸ್ ಸಿಯ ಉನ್ನತ ಮಟ್ಟದ ನಾಯಕರು, ಧಾರ್ಮಿಕ ನೇತಾರರು, ಸಾದಾತುಗಳು ಮತ್ತು ಸಮಾಜ ಸೇವಾ ಧುರೀಣರು ಭಾಗವಹಿಸುವರು.

1995 ರಲ್ಲಿ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ಸ್ಥಾಪನೆಯಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಎಂಬ ಸಂಘಟನೆ 1999ರಲ್ಲಿ ಯುಎಇಗೆ ಪಾದಾರ್ಪಣೆ ಗೈಯ್ಯುವುದರೊಂದಿಗೆ ತನ್ನ ಅಸ್ತಿತ್ವವನ್ನು ಬಲಪಡಿಸಿತು. ಧಾರ್ಮಿಕ, ಲೌಕಿಕ ವಿದ್ಯಾಭ್ಯಾಸವನ್ನು ಒಂದೇ ಚಾವಣಿಯಡಿಯಲ್ಲಿ ನೀಡುವ, ದಕ್ಷಿಣ ಕರ್ನಾಟಕದ ವಿದ್ಯಾ ಕೇಂದ್ರಗಳ ಮಧ್ಯೆ ಯೋಗ್ಯ ಮತ್ತು ಬೃಹತ್ ವಿದ್ಯಾ ಕೇಂದ್ರವಾಗಿದ್ದು, ಇದೊಂದು ಅನಿವಾಸಿ ಕನ್ನಡಿಗ ಮುಸಲ್ಮಾನರಿಂದ ನಡೆಸಲ್ಪಡುವ ಭಾರತದಲ್ಲೇ ಜನಪ್ರಿಯ ವಿದ್ಯಾ ಸಮುಚ್ಚಯ ಎಂದೇ ಹೇಳಬಹುದಾದ ಸಂಸ್ಥೆಯಾಗಿರುತ್ತದೆ. ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಅದರ ಸಮಗ್ರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು   ಸ್ವಾಗತ ಸಮಿತಿ ಚೆಯರ್ ಮ್ಯಾನ್  ಶುಕೂರ್ ಮನಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News