ಕೇಸರಿ ಬಣ್ಣದ ಜೆರ್ಸಿ ಒಂದು ಪಂದ್ಯಕ್ಕೆ ಸೀಮಿತ

Update: 2019-06-29 18:42 GMT

ಬರ್ಮಿಂಗ್‌ಹ್ಯಾಮ್, ಜೂ.29: ಟೀಮ್ ಇಂಡಿಯಾ ರವಿವಾರ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಆರೆಂಜ್-ಬ್ಲೂ ಬಣ್ಣದ ಜೆರ್ಸಿ ಧರಿಸಿ ಆಡಲಿದೆ.

‘‘ನನಗೆ ಈ ಜೆರ್ಸಿ ತುಂಬಾ ಇಷ್ಟವಾಯಿತು. ಇದಕ್ಕೆ 10ರಲ್ಲಿ 8 ಅಂಕ ನೀಡುವೆ. ಈ ಜೆರ್ಸಿ ಖಾಯಂ ಆಗಿ ಇರುವುದಿಲ್ಲ. ಇದು ಒಂದು ಪಂದ್ಯಕ್ಕೆ ಸೀಮಿತ. ನೀಲಿ ಯಾವಾಗಲೂ ನಮ್ಮ ಬಣ್ಣವಾಗಿದೆ. ಅದನ್ನು ಧರಿಸಲು ಹೆಮ್ಮೆಯಾಗುತ್ತದೆ. ಬದಲಾವಣೆಗಾಗಿ ಹಾಗೂ ಆ ಸಂದರ್ಭದಲ್ಲಿ ಈ ಕಿಟ್ ಸೊಗಾಸಾಗಿದೆ’’ ಎಂದು ಸುದ್ದಿಗಾರರಿಗೆ ಕೊಹ್ಲಿ ತಿಳಿಸಿದರು.

 ಇತರ ನಾಲ್ಕು ತಂಡಗಳು ಎದುರಾಳಿ ತಂಡಕ್ಕಿಂತ ಭಿನ್ನವಾಗಿರಲು ವಿಭಿನ್ನ ಜೆರ್ಸಿಗಳನ್ನು ಧರಿಸಿವೆ. ದ.ಆಫ್ರಿಕ ಸಾಮಾನ್ಯವಾಗಿ ಗ್ರೀನ್ ಜೆರ್ಸಿ ಧರಿಸುತ್ತದೆ. ಎರಡು ಪಂದ್ಯಗಳಲ್ಲಿ ಬಂಗಾರದ ಬಣ್ಣವನ್ನು ಪರ್ಯಾಯವಾಗಿ ಆಯ್ಕೆ ಮಾಡಿತ್ತು. ಶ್ರೀಲಂಕಾ ತಂಡ ಕೆಲವು ಪಂದ್ಯಗಳಲ್ಲಿ ಬ್ಲೂ ಬದಲಿಗೆ ಹಳದಿ ಬಣ್ಣದ ಜೆರ್ಸಿಯೊಂದಿಗೆ ಆಡಿದೆ. ಹಸಿರು ಬಣ್ಣದ ಜೆರ್ಸಿ ಧರಿಸುವ ಬಾಂಗ್ಲಾದೇಶ ತಂಡ ಪಾಕ್ ವಿರುದ್ಧ ತಂಡದಲ್ಲಿ ಕೆಂಪುಬಣ್ಣದ ಜೆರ್ಸಿ ಧರಿಸಿ ಆಡಲಿದೆ.

ಕುತೂಹಲಕಾರಿ ಅಂಶವೆಂದರೆ ಇಂಗ್ಲೆಂಡ್, ಭಾರತ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಬ್ಲೂ ಬಣ್ಣದ ಅಧಿಕ ವಿರುವ ಜರ್ಸಿಯನ್ನೇ ತೊಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News