ಖಶೋಗಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಕೆಲವರು ಹಣ ನೀಡುತ್ತಿದ್ದಾರೆ: ಟರ್ಕಿ ಅಧ್ಯಕ್ಷ ಎರ್ದೊಗಾನ್

Update: 2019-07-01 10:56 GMT

ಅಂಕಾರ, ಜು.1: ಸೌದಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಕೆಲ ಜನರು ಹಣ ನೀಡುತ್ತಿದ್ದಾರೆಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗನ್ ಹೇಳಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಜಪಾನ್ ದೇಶದ ಒಸಾಕದಲ್ಲಿ ಜಿ20 ಶೃಂಗಸಭೆಯ ನಂತರ ಸುದ್ದಿಗಾರರೊಡನೆ ಮಾತನಾಡುವ ಸಂದರ್ಭ ಮೇಲಿನಂತೆ ಹೇಳಿದ ಟರ್ಕಿ ಅಧ್ಯಕ್ಷ ಅದಕ್ಕಿಂತ ಹೆಚ್ಚಿನ ವಿವರಣೆ ನೀಡಿಲ್ಲ.

ವಾಷಿಂಗ್ಟನ್ ಪೋಸ್ಟ್ ಅಂಕಣಕಾರನಾಗಿದ್ದ ಖಶೋಗಿ ಹಂತಕರನ್ನು  ಸೌದಿ ಅರೇಬಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್  ಬಯಲುಗೊಳಿಸಬೇಕೆಂದು  ಶೃಂಗಸಭೆಯಲ್ಲಿ ಮಾತನಾಡುತ್ತಾ ಎರ್ದೊಗಾನ್ ಹೇಳಿದರಲ್ಲದೆ, ಈ ಕೊಲೆ ಪ್ರಕರಣದ ಕೆಲ ವಿಚಾರಗಳನ್ನು ಮುಚ್ಚಿ ಹಾಕಲಾಗಿದೆ ಎಂದೂ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News