ವಿಧಾನಸಭೆ ಅಧಿವೇಶನದ ಅಧಿಸೂಚನೆ ಪ್ರಕಟ

Update: 2019-07-01 18:31 GMT

ಬೆಂಗಳೂರು, ಜು.1: ರಾಜ್ಯದ 15ನೇ ವಿಧಾನಸಭೆಯ ನಾಲ್ಕನೆ ಅಧಿವೇಶನವು ಜು.12ರಂದು ಮಧ್ಯಾಹ್ನ 12.30ಕ್ಕೆ ವಿಧಾನಸೌಧದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಸಮಾವೇಶಗೊಳ್ಳಲಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ(ಪ್ರ) ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.

ಜು.12ರಂದು ಸರಕಾರಿ ಕಾರ್ಯಕಲಾಪಗಳು, 13 ಹಾಗೂ 14ರಂದು ಸಾರ್ವತ್ರಿಕ ರಜೆ, ಜು.15, 16, 17ರಂದು ಸರಕಾರಿ ಕಾರ್ಯಕಲಾಪಗಳು, ಜು.18ರಂದು ಖಾಸಗಿ-ಸರಕಾರಿ ಕಾರ್ಯಕಲಾಪಗಳು, 19ರಂದು ಸರಕಾರಿ ಕಾರ್ಯಕಲಾಪಗಳು, 20ರಂದು ಕಾರ್ಯಕಲಾಪ ಇರುವುದಿಲ್ಲ, 21ರಂದು ಸಾರ್ವತ್ರಿಕ ರಜೆ, 22, 23, 24ರಂದು ಸರಕಾರಿ ಕಾರ್ಯಕಲಾಪಗಳು, 25ರಂದು ಖಾಸಗಿ-ಸರಕಾರಿ ಕಾರ್ಯಕಲಾಪಗಳು ಹಾಗೂ 26ರಂದು ಸರಕಾರಿ ಕಾರ್ಯಕಲಾಪಗಳು ನಡೆಯಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News