×
Ad

ಲಂಚಕ್ಕೆ ಬೇಡಿಕೆ ಆರೋಪ: ಸರ್ವೆಯರ್ ಎಸಿಬಿ ಬಲೆಗೆ

Update: 2019-07-02 19:04 IST

ಬೆಂಗಳೂರು, ಜು.2: ಜಮೀನಿನ ಪೋಡಿ ಮಾಡಿಸಿಕೊಳ್ಳುವ ಸಲುವಾಗಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಲಂಚ ನೀಡುವಂತೆ ಬೇಡಿಕೆಯಿಟ್ಟ ಆರೋಪದಡಿ ಸರ್ವೆಯರ್ ಓರ್ವ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರು ಉತ್ತರ ತಾಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸರ್ವೆಯರ್ ಕೆ.ಪಿ.ನಾಗಪ್ಪ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿದೆ.

2018ರ ಡಿಸೆಂಬರ್‌ನಲ್ಲಿ ನಿವಾಸಿಯೊಬ್ಬರು ಅವರಿಗೆ ಸಂಬಂಧಪಟ್ಟ ಜಮೀನಿನ ಪೋಡಿ ಮಾಡಿಸಿಕೊಳ್ಳುವ ಸಲುವಾಗಿ ಬಾಗಲುಗುಂಟೆ ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಆರೋಪಿ ನಾಗಪ್ಪ 55 ಸಾವಿರ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ. ಈ ಸಂಬಂಧ ದೂರು ದಾಖಲಾಗಿತ್ತು.

ದೂರಿನ್ವಯ ಮಂಗಳವಾರ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಸರ್ವೆಯರ್ ನಾಗಪ್ಪನನ್ನು ಬಂಧಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News