ಲಾರಾ ದಾಖಲೆ ಮುರಿಯುವುದರಿಂದ ವಂಚಿತರಾದ ಗೇಲ್

Update: 2019-07-05 03:39 GMT

 ಲೀಡ್ಸ್, ಜು.4: ಸ್ಫೋಟಕ ಆರಂಭಿಕ ಆಟಗಾರ ಕ್ರಿಸ್ ಗೇಲ್ ಮಾಜಿ ಕ್ರಿಕೆಟಿಗ ಹಾಗೂ ಸಹ ಆಟಗಾರ ಬ್ರಿಯಾನ್ ಲಾರಾ ಅವರ ದಾಖಲೆಯೊಂದನ್ನು ಮುರಿಯುವುದರಿಂದ ವಂಚಿತರಾದರು. ಲಾರಾ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 10,348 ರನ್ ಗಳಿಸುವ ಮೂಲಕ ವೆಸ್ಟ್‌ಇಂಡೀಸ್‌ನ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. 39ರ ಹರೆಯದ ಗೇಲ್‌ಗೆ ಅಫ್ಘಾನಿಸ್ತಾನ ವಿರುದ್ಧ ಗುರುವಾರ ಇಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಲಾರಾ ದಾಖಲೆ ಮುರಿಯುವ ಅಪೂರ್ವ ಅವಕಾಶ ಲಭಿಸಿತ್ತು. ಒಟ್ಟು 10,331 ರನ್ ಗಳಿಸಿರುವ ಗೇಲ್‌ಗೆ ಲಾರಾ ದಾಖಲೆ ಮುರಿಯಲು ಕೇವಲ 17 ರನ್ ಗಳಿಸಬೇಕಾಗಿತ್ತು.

ಆದರೆ, 18 ಎಸೆತಗಳನ್ನು ಎದುರಿಸಿದ ಗೇಲ್ 1 ಬೌಂಡರಿ ಸಹಿತ ಕೇವಲ 7 ರನ್ ಗಳಿಸಿ ದೌಲತ್ ಝದ್ರಾನ್‌ಗೆ ವಿಕೆಟ್ ಒಪ್ಪಿಸಿದರು. ಝದ್ರಾನ್ ಅವರು ಗೇಲ್‌ಗೆ ಹೊಸ ಮೈಲುಗಲ್ಲು ತಲುಪುದನ್ನು ನಿರಾಕರಿಸಿದರು. 10,338 ರನ್ ಗಳಿಸಿರುವ ಗೇಲ್ ವೆಸ್ಟ್‌ಇಂಡೀಸ್‌ನ ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಅಫ್ಘಾನ್ ವಿರುದ್ದ ಪಂದ್ಯ ಗೇಲ್ ಅವರ ವಿದಾಯದ ಏಕದಿನ ಪಂದ್ಯ ಎಂದು ಐಸಿಸಿ ಟ್ವೀಟ್‌ನಲ್ಲಿ ಸುಳಿವು ನೀಡಿದೆ.

ಱಱಏಕದಿನದಲ್ಲಿ ನಾವು ಕ್ರಿಸ್ ಗೇಲ್‌ರನ್ನು ಕೊನೆಯ ಬಾರಿ ನೋಡುತ್ತಿದ್ದೇವೆಯೇ?ಬ್ರಿಯಾನ್ ಲಾರಾ ಅವರ ಗರಿಷ್ಠ ಏಕದಿನ ಸ್ಕೋರ್ ದಾಖಲೆ ಮುರಿಯಲು ಗೇಲ್‌ಗೆ ಮತ್ತೊಂದು ಅವಕಾಶ ನೀಡಲಾಗುವುದೇ? ಎಂದು ಐಸಿಸಿ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News