ಬಿಎಂಟಿಸಿ: ಶೀಘ್ರವೆ ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ಕೋರಿಕೆ

Update: 2019-07-05 16:59 GMT

ಬೆಂಗಳೂರು, ಜು.5: ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ಪಡೆಯದೆ ಇರುವ ವಿದ್ಯಾರ್ಥಿಗಳು ಶೀಘ್ರವೆ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಿಎಂಟಿಸಿ ವೆಬ್‌ಸೈಟ್ www.mybmtc.com ನಲ್ಲಿ ನೋಂದಣಿಯಾಗದ ಶಿಕ್ಷಣ ಸಂಸ್ಥೆಗಳು ಕೂಡಲೆ ನೋಂದಾಯಿಸಿಕೊಳ್ಳಬೇಕೆಂದು ಬಿಎಂಟಿಸಿ ಮನವಿ ಮಾಡಿದೆ. ಬಿಎಂಟಿಸಿ 2019-20ನೆ ಸಾಲಿನ ವಿದ್ಯಾರ್ಥಿ ಪಾಸ್‌ಗಳನ್ನು ಪಡೆಯಲು ಸಂಸ್ಥೆಯ ವೆಬ್‌ಸೈಟ್‌ www.mybmtc.com ನಲ್ಲಿ ಜೂ.13 ರಿಂದಲೇ ಆನ್‌ಲೈನ್ ಅರ್ಜಿಯನ್ನು ಲಭ್ಯವಿರಿಸಲಾಗಿದೆ ಹಾಗೂ ಜೂ.17 ರಿಂದ ವಿದ್ಯಾರ್ಥಿ ಪಾಸುಗಳನ್ನು ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. 

ಬಿಎಂಟಿಸಿ ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರಕಾರದ ನಿರ್ದೇಶನದಂತೆ ಸಂಸ್ಥೆಯು ರಚನೆಯಾದಾಗಿನಿಂದಲೂ ಅತಿ ಹೆಚ್ಚಿನ ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಿತರಣೆ ಮಾಡುತ್ತಿದೆ. ಅದರಂತೆ ವಿದ್ಯಾರ್ಥಿ ಪಾಸುಗಳನ್ನು ಸಂಸ್ಥೆಯ 15 ಬಸ್ ನಿಲ್ದಾಣಗಳಲ್ಲಿ 50 ಕೌಂಟರ್‌ಗಳ ಮೂಲಕ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಂದ ಬಸ್ ಪಾಸಿಗಾಗಿ ಅರ್ಜಿಗಳನ್ನು ಸ್ವೀಕರಿಸಿದ್ದು, ಇಲ್ಲಿಯವರೆಗೂ 1,08,835 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಅರ್ಜಿಗಳಲ್ಲಿ 35,549 ಪಾಸುಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. 13,738 ಅರ್ಜಿಗಳನ್ನು ವಿದ್ಯಾರ್ಥಿಗಳು ಸರಿಯಾದ ಮಾಹಿತಿಯೊಂದಿಗೆ ಸಲ್ಲಿಸದ ಕಾರಣ ತಿರಸ್ಕೃತವಾಗಿರುತ್ತವೆ. ವಿದ್ಯಾರ್ಥಿ ಪಾಸಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ವಿವರವಾದ ಮಾಹಿತಿಯು ಸಂಸ್ಥೆಯ ವೆಬ್‌ಸೈಟ್‌ನಲ್ಲಿ www.mybmtc.com ನಲ್ಲಿ ಲಭ್ಯವಿದ್ದು, ಮಾಹಿತಿಯನ್ನು ಪಡೆದ ನಂತರ ಅರ್ಜಿ ಸಲ್ಲಿಸುವಂತೆ ವಿದ್ಯಾರ್ಥಿಗಳಲ್ಲಿ ಬಿಎಂಟಿಸಿ ಮನವಿ ಮಾಡಿದೆ.

19,462 ಅರ್ಜಿಗಳು ಕಾಲೇಜುಗಳಿಂದ ಅನುಮೋದನೆಯಾಗಬೇಕಾಗಿದ್ದು, ಸದರಿ ಅರ್ಜಿಗಳನ್ನು ಕಾಲೇಜುಗಳಿಂದ ಅನುಮೋದಿಸುವಂತೆ ಸಂಸ್ಥೆಯು ಕೋರಿದೆ. 40,086 ವಿದ್ಯಾರ್ಥಿಗಳ ಅರ್ಜಿಗಳನ್ನು ಅನುಮೋದಿಸಿದ್ದು, ಸದರಿ ವಿದ್ಯಾರ್ಥಿಗಳು ಪಾಸು ಪಡೆಯುವ ವೇಳೆ, ದಿನಾಂಕ, ಸ್ಥಳವನ್ನು ನಿಗದಿಪಡಿಸಿಕೊಂಡು ಪಾಸನ್ನು ಪಡೆಯಲು ಪ್ರಕಟನೆಯಲ್ಲಿ ಕೋರಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News