70ನೇ ಬಾರಿ ಮೂರನೇ ಸುತ್ತು ತಲುಪಿದ ರೋಜರ್ ಫೆಡರರ್

Update: 2019-07-05 18:57 GMT

ಲಂಡನ್, ಜು.5: ಸ್ವಿಸ್‌ನ ಹಿರಿಯ ಆಟಗಾರ ರೋಜರ್ ಫೆಡರರ್ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ವೈರ್ಲ್ಡ್‌ಕಾರ್ಡ್ ಆಟಗಾರ ಜೈ ಕ್ಲಾರ್ಕ್‌ರನ್ನು ಸೋಲಿಸಿ ಅಂತಿಮ-32ರ ಸುತ್ತಿಗೆ ತಲುಪಿದರು. 8 ಬಾರಿಯ ವಿಂಬಲ್ಡನ್ ಚಾಂಪಿಯನ್ ಫೆಡರರ್, ಕ್ಲಾರ್ಕ್‌ರನ್ನು 6-1, 7-6(7/3),6-2 ಸೆಟ್‌ಗಳಿಂದ ಸೋಲಿಸಿದರು. 21ನೇ ಪ್ರಮುಖ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಫೆಡರರ್ ಗ್ರಾನ್‌ಸ್ಲಾಮ್‌ನಲ್ಲಿ 70ನೇ ಬಾರಿ ಮೂರನೇ ಸುತ್ತು ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News