ಭಾರತದಲ್ಲಿ ಮಹಿಳಾ ಉದ್ಯಮಿಗಳ ದಯನೀಯ ಸ್ಥಿತಿ

Update: 2019-07-06 18:34 GMT

ಯಾವುದೇ ವ್ಯಾಪಾರೋದ್ಯಮ ಸುಗಮವಾಗಿ ಸಾಗಬೇಕಾದರೆ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿ ಖಾತೆ ಕಡ್ಡಾಯ ಅವಶ್ಯಕತೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಭಾರತದಲ್ಲಿ ಶೇ. 40 ಎಂಟರ್‌ಪ್ರೈಸ್‌ಗಳಿಗೆ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆ ಇರಲಿಲ್ಲ ಮತ್ತು ಮಹಿಳಾ ಉದ್ಯಮಿಗಳಲ್ಲಿ ಅರ್ಧ ಕ್ಕಿಂತಲೂ ಹೆಚ್ಚು ಮಂದಿಗೆ ಇವೆರಡರಲ್ಲಿ ಒಂದು ಖಾತೆಯೂ ಇರಲಿಲ್ಲ.


ಆರನೇ ಆರ್ಥಿಕ ಗಣತಿ (2013) ಯೂನಿಟ್ ಮಟ್ಟದ ದತ್ತಾಂಶಗಳ ಪ್ರಕಾರ, ವಿಭಿನ್ನ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವ ಒಟ್ಟು ವ್ಯಾಪಾರೋದ್ಯಮಗಳ (ಎಂಟರ್‌ಪ್ರೈಸಸ್)ಸಂಖ್ಯೆ 58.5 ಮಿಲಿಯ ಆಗಿತ್ತು. ಇವುಗಳಲ್ಲಿ ಬೆಳೆ ಉತ್ಪಾದನೆ, ಪ್ಲಾಂಟೇಷನ್, ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಕಡ್ಡಾಯ ಸಾಮಾಜಿಕ ಭದ್ರತೆ ಸೇರಿಲ್ಲ. ಈ ಎಂಟರ್‌ಪ್ರೈಸ್‌ಗಳಲ್ಲಿ ಬಹುಪಾಲು (ಮುಕ್ಕಾಲು ಭಾಗಕ್ಕೂ ಹೆಚ್ಚು) ವ್ಯವಸಾಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಮತ್ತು ಇವುಗಳಲ್ಲಿ ಚಿಲ್ಲರೆ ವಹಿವಾಟು ಮತ್ತು ಉತ್ಪಾದನೆಗಳು ಪ್ರಧಾನವಾಗಿದ್ದವು. ಇವೆರಡು ಒಟ್ಟು ವ್ಯವಸಾಯೇತರ ಎಂಟರ್‌ಪ್ರೈಸ್‌ಗಳ ಶೇ.58ರಷ್ಟು ಆಗಿದ್ದವು. ಇವುಗಳು 108.41 ಮಿಲಿಯ ವ್ಯಕ್ತಿಗಳಿಗೆ ಉದ್ಯೋಗ ನೀಡಿದ್ದವಾದರೂ, ಆ ಉದ್ಯೋಗಿಗಳಲ್ಲಿ ಕೇವಲ 33.04 ಮಿಲಿಯ (ಶೇ. 25) ಮಹಿಳೆಯರು ಎಂಬುದು ಗಮನಾರ್ಹ. ಆದರೆ ಕೇವಲ 8.05 ಮಿಲಿಯ ಎಂಟರ್‌ಪ್ರೈಸ್‌ಗಳು ಮಹಿಳೆಯರ ಮಾಲಕತ್ವದಲ್ಲಿದ್ದವು ಎಂಬುದು ಈ ರಂಗದಲ್ಲಿರುವ ಲಿಂಗ ತಾರತಮ್ಯವನ್ನು ಎತ್ತಿ ತೋರಿಸುತ್ತವೆ. ಅಲ್ಲದೆ ಈ ಎಂಟರ್‌ಪ್ರೈಸ್‌ಗಳು ಮುಖ್ಯವಾಗಿ ಪಶುಸಾಕಣೆ, ಕೃಷಿ ಹಾಗೂ ಮ್ಯಾನು ಫ್ಯಾಕ್ಚರಿಂಗ್ ಉದ್ಯಮಗಳ ರಂಗಕ್ಕೆ ಸೀಮಿತವಾಗಿದ್ದವು ಎಂಬುದನ್ನು ಗಮನಿಸಬೇಕು.

ಲಭ್ಯ ಅಂಕಿ ಅಂಶಗಳ ಪ್ರಕಾರ ವ್ಯಾಪಾರೋದ್ಯಮಗಳ ಬಹುಪಾಲು ಚಿಕ್ಕಪುಟ್ಟ ಮಾಲಕರು ನಡೆಸುವವುಗಳಾಗಿದ್ದು ಮಹಿಳೆಯರ ಕೈಯಲ್ಲಿ ತೀರಾ ಕಡಿಮೆ ಸಂಖ್ಯೆಯ ವ್ಯಾಪಾರೋದ್ಯಮಗಳಿವೆ.

ಮಾಲಕತ್ವದ ರೀತಿಗಳು

ವ್ಯಾಪಾರೋದ್ಯಮಗಳ ಮಾಲಕತ್ವದ ರೀತಿಗಳು, ನಮೂನೆಗಳು ಭಾರತದಲ್ಲಿ ವ್ಯಾಪಾರೋದ್ಯಮಗಳ ಕಾರ್ಯವಿಧಾನ ಹಾಗೂ ಆರ್ಥಿಕ ಚಟುವಟಿಕೆ ಗಳಿಗೆ ಸಂಬಂಧಿಸಿದ ಗುಣಲಕ್ಷಣಗಳ ಬಗ್ಗೆ ಉಪಯೋಗ ಕಾರಿಯಾದ ಒಳನೋಟಗಳನ್ನು ನೀಡಬಲ್ಲವು. ಮಾಲಕತ್ವದ ಎಂಟರ್‌ಪ್ರೈಸ್‌ಗಳು, ಅಂದರೆ ಯಾವುದೇ ನೌಕರನನ್ನು ನೇಮಿಸಿಕೊಳ್ಳದೆ ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಮಾಲಕತ್ವ ಹೊಂದಿರುವ ಎಂಟರ್‌ಪ್ರೈಸ್‌ಗಳು (2015-16ರಲ್ಲಿ) ವ್ಯವಸಾಯೇತರ ಎಂಟರ್‌ಪ್ರೈಸ್‌ಗಳಲ್ಲಿ ಅತ್ಯಂತ ಹೆಚ್ಚಿನ, ಗರಿಷ್ಠ (ಶೇ. 96) ಸಂಖ್ಯೆಯಲ್ಲಿದ್ದವು. ಇಲ್ಲಿ ಕೂಡ ಲಿಂಗ ತಾರತಮ್ಯ ಕಂಡು ಬರುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಸುಮಾರು ಐದನೆಯ ಒಂದು ಪಾಲು ಎಂಟರ್‌ಪ್ರೈಸ್‌ಗಳು ಮಹಿಳೆಯರೇ ನಡೆಸುತ್ತಿದ್ದವುಗಳಾಗಿದ್ದವು. ಆದರೆ ಅವುಗಳು ಮುಖ್ಯವಾಗಿ ಏಕವ್ಯಕ್ತಿ ಮಾಲಕತ್ವಕ್ಕೆ ಸೀಮಿತವಾಗಿದ್ದವು ಮತ್ತು ಸ್ವಲ್ಪಬೃಹತ್ತಾದ ವ್ಯಾಪಾರೋದ್ಯಮ (ಎಸ್ಟಾಬ್ಲಿಷ್‌ಮೆಂಟ್)ಗಳಲ್ಲಿ ಮಹಿಳೆಯರ ಪಾಲು ತೀರಾ ಕಡಿಮೆ (ಶೇ. 4.5) ಮಾತ್ರ ಆಗಿತ್ತು.
ಈ ಗೃಹ ಆಧಾರಿತ ಮಾಲಕಿಯರು ಮುಖ್ಯವಾಗಿ ಅಸಂಘಟಿತ, ಇನ್‌ಫಾರ್ಮಲ್ ಎಂಟರ್‌ಪ್ರೈಸಸ್‌ಗಳಾಗಿದ್ದವು. ಅವರ ಕಾರ್ಯವಿಧಾನವು ಕಚ್ಚಾ ಸಾಮಗ್ರಿಗಳ ಲಭ್ಯತೆ ಮತ್ತು ಅವರು ತಯಾರಿಸುತ್ತಿದ್ದ ಉತ್ಪನ್ನಗಳಿಗೆ, ಅವರು ನೀಡುತ್ತಿದ್ದ ಸೇವೆಗಳಿಗೆ ಇದ್ದ ಬೇಡಿಕೆಯನ್ನು ಅವಲಂಬಿಸಿರುತ್ತಿತ್ತು. ಅಲ್ಲದೆ ತಮ್ಮ ಕಾರ್ಯವಿಧಾನದಲ್ಲಿ ಅವರು ಹಲವಾರು ಸಮಸ್ಯೆ ಗಳನ್ನು ಎದುರಿಸಬೇಕಾಗಿತ್ತು. ಅವುಗಳಲ್ಲಿ ಬೇಡಿಕೆ ಸಂಕುಚನ/ಕುಸಿತ ಅವರಿಗೆ ಎದುರಾದ ಅತ್ಯಂತ ಮುಖ್ಯ ಸವಾಲುಗಳಲ್ಲಿ ಒಂದು ಸವಾಲಾಗಿತ್ತು.

ಮೂಲ ಚೌಕಟ್ಟಿನ ಲಭ್ಯತೆ
 ಎಂಟರ್‌ಪ್ರೈಸ್‌ಗಳ ಒಳಗಡೆಯೇ ಶೌಚಾಲಯ ಸೌಕರ್ಯ ಮತ್ತು ತ್ಯಾಜ್ಯ ನಿರ್ವಹಣೆಯಂತಹ ಮೂಲ ಚೌಕಟ್ಟುಗಳ ಲಭ್ಯತೆಯ ವಿಷಯದಲ್ಲಿ ಲಿಂಗ ಆಧಾರಿತ ಎಂಟರ್‌ಪ್ರೈಸ್‌ಗಳ ವಿಭಜನೆ ಇದೆ. ಇದು ಪುರುಷ ಮಾಲಕತ್ವದ ಎಂಟರ್‌ಪ್ರೈಸ್‌ಗಳಿಗೆ ಹೋಲಿಸಿದಾಗ ಮಹಿಳೆಯರು ನಡೆಸುವ ಉದ್ಯಮಗಳು ಹೆಚ್ಚು ಅನನುಕೂಲತೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತೋರಿಸುತ್ತದೆ. ತಮ್ಮ ಎಂಟರ್‌ಪ್ರೈಸ್‌ಗಳಲ್ಲಿ ಕೇವಲ ಶೇ. 23 ಮಹಿಳೆಯರಿಗೆ ಮಾತ್ರ ಶೌಚಾಲಯ ಸೌಕರ್ಯ ವಿತ್ತು. ಎಂಟರ್‌ಪ್ರೈಸ್‌ಗಳ ಮಾಲಕತ್ವ ಹೊಂದಿದ ಮಹಿಳೆಯರಲ್ಲಿ ಶೇ. 18 ಮಹಿಳೆ ಯರಿಗೆ ಮಾತ್ರ ಘನತ್ಯಾಜ್ಯ ನಿರ್ವಹಣೆಯ ಸವಲತ್ತು ಲಭ್ಯವಿತ್ತು ಮತ್ತು ಶೇ. 10 ಮಂದಿ ಮಹಿಳೆಯರಿಗೆ ಮಾತ್ರ ದ್ರವತ್ಯಾಜ್ಯ ನಿರ್ವಹಣೆಯ ಸವಲತ್ತು ಲಭ್ಯವಿತ್ತು.

ಮಹಿಳೆಯರ ಸ್ವಂತ ಮಾಲಕತ್ವದ ಒಟ್ಟು ವ್ಯಾಪಾರೋದ್ಯಮದಲ್ಲಿ ಶೇ. 98 ಎಂಟರ್‌ಪ್ರೈಸ್‌ಗಳು ಕಂಪ್ಯೂಟರ್ ಬಳಸುತ್ತಿರಲಿಲ್ಲ ಮತ್ತು ದೊಡ್ಡ ಎಂಟರ್‌ಪ್ರೈಸ್‌ಗಳ ಶೇ. 20 ಮಾತ್ರ ಒಂದು ಕಂಪ್ಯೂಟರ್ ಬಳಸುತ್ತಿದ್ದವು. ಹಾಗೆಯೇ ಅಂತರ್ಜಾಲವನ್ನು ಕೇವಲ ಶೇ. 5 ಎಂಟರ್‌ಪ್ರೈಸ್‌ಗಳು ಬಳಸುತ್ತಿದ್ದವು. ಸ್ವಂತ ಮಾಲಕತ್ವದ ಎಂಟರ್‌ಪ್ರೈಸ್‌ಗಳು (2015-16ರಲ್ಲಿ) ಅಂತರ್ಜಾಲವನ್ನು ಬಳಸುವ ಅವಕಾಶಗಳು ಇನ್ನಷ್ಟು ಕಡಿಮೆ ಇದ್ದವು. ಯಾವುದೇ ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿ ಕೂಡ ಲಿಂಗ ಆಧಾರಿತವಾದ ವಿಭಜನೆ ಕಂಡುಬಂತು. ಯಾವುದೇ ವ್ಯಾಪಾರೋದ್ಯಮ ಸುಗಮವಾಗಿ ಸಾಗಬೇಕಾದರೆ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿ ಖಾತೆ ಕಡ್ಡಾಯ ಅವಶ್ಯಕತೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಭಾರತದಲ್ಲಿ ಶೇ. 40 ಎಂಟರ್‌ಪ್ರೈಸ್‌ಗಳಿಗೆ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆ ಇರಲಿಲ್ಲ ಮತ್ತು ಮಹಿಳಾ ಉದ್ಯಮಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿಗೆ ಇವೆರಡರಲ್ಲಿ ಒಂದು ಖಾತೆಯೂ ಇರಲಿಲ್ಲ. ಇವರಲ್ಲಿ ಬಹುಪಾಲು ಮಂದಿ ನಗದು ವ್ಯವಹಾರವನ್ನೇ ಅವಲಂಬಿಸಬೇಕಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.

ಸ್ವ-ಉದ್ಯೋಗ
ಸ್ವ-ಉದ್ಯೋಗದ ರಂಗದಲ್ಲಿ ಉದ್ಯೋಗಿಗಳಾ ಗಿರುವ ಶೇ.58 ಮಹಿಳೆಯರಲ್ಲಿ ಕೇವಲ ಶೇ. 19 ಮಂದಿ ಮಾತ್ರ ಮಾಲಕರು ಮತ್ತು ಉಳಿದವರು ವೇತನವಿಲ್ಲದ ಕುಟುಂಬ ಶ್ರಮಿಕರು. ಇವರು ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದ ವ್ಯವಸಾಯ ಮತ್ತು ಪಶು ಸಂಗೋಪನೆಗೆ ನೆರವಾಗುತ್ತಾ ದುಡಿಯುವವರು.
ನಗರ ಪ್ರದೇಶಗಳಲ್ಲಿ ಶೇ. 52 ಮಹಿಳಾ ಶ್ರಮ ಶಕ್ತಿಯಲ್ಲಿ ಶೇ. 35 ಸ್ವ-ಉದ್ಯೋಗಿಗಳು ನೀತಿ ಆಯೋಗವು ಬಿಡುಗಡೆ ಮಾಡಿರುವ ‘ಸ್ಟ್ರಾಟಜಿ ಫಾರ್ ನ್ಯೂ ಇಂಡಿಯಾ ಃ75’ ದಾಖಲೆಯು ಮಹಿಳೆಯ ರಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ ಮಹಿಳೆಯ ರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಇದನ್ನು ಈಡೇರಿಸಲು ನಾವು ಹಲವು ರಂಗಗಳನ್ನು ಒಳಗೊಳ್ಳುವ ತಂತ್ರಗಳನ್ನು, ಬೃಹತ್ ಮಟ್ಟದಲ್ಲಿ ಆರ್ಥಿಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಕೃಪೆ: thewire.in 

Writer - ಶೈನಿ ಚಕ್ರವರ್ತಿ

contributor

Editor - ಶೈನಿ ಚಕ್ರವರ್ತಿ

contributor

Similar News