ಲೋಕಸಭಾ ಚುನಾವಣೆ: ಇವಿಎಂಗಳಿಗೆ 5,400 ಕೋಟಿ ರೂ. ವೆಚ್ಚ

Update: 2019-07-07 09:15 GMT

ಹೊಸದಿಲ್ಲಿ, ಜು.7: ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಗೆ ಸರ್ಕಾರ 9,000 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಈ ಪೈಕಿ 5,400 ಕೋಟಿ ರೂಪಾಯಿ ವಿದ್ಯುನ್ಮಾನ ಮತಯಂತ್ರ (ಇವಿಎಂ ಹಾಗೂ ವಿವಿಪ್ಯಾಟ್) ಖರೀದಿಗೆ ವೆಚ್ಚವಾಗಿದೆ.

ಲೋಕಸಭಾ ಚುನಾವಣೆಗಾಗಿ ಮಾಡಿದ ನೇರ ವೆಚ್ಚ ಕಳೆದ ಮೂರು ಹಣಕಾಸು ವರ್ಷಗಳಲ್ಲಿ 2,019 ಕೋಟಿ ರೂಪಾಯಿ. ಇದು ಇವಿಎಂ ಖರೀದಿಗೆ ಮಾಡಿದ ವೆಚ್ಚದ ಬಳಿಕ ಆಗಿರುವ ಎರಡನೇ ಅತಿದೊಡ್ಡ ವೆಚ್ಚವಾಗಿದೆ. ಇತರ ವೆಚ್ಚ ಶೀರ್ಷಿಕೆಯಡಿ 1,317 ಕೊಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

2019-20ನೇ ಸಾಲಿನ ಬಜೆಟ್‍ ನಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ 1,000 ಕೋಟಿ ರೂಪಾಯಿಗಳನ್ನು, ಚುನಾವಣೆ ಸಂದರ್ಭದಲ್ಲಿ ಬಾಕಿ ಉಳಿಸಿಕೊಂಡಿರುವ ಬಿಲ್ ಪಾವತಿಗಾಗಿ ಹಂಚಿಕೆ ಮಾಡಿದೆ. ಸಾರ್ವತ್ರಿಕ ಚುನಾವಣೆಗಾಗಿ ಕಳೆದ ವರ್ಷ ಮಾಡಿದ ವೆಚ್ಚವೂ ಸೇರಿದಂತೆ ಒಟ್ಟು 8,966 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಇವಿಎಂ ಖರೀದಿ, ಮತದಾರರ ಗುರುತಿನ ಪತ್ರ ಹಂಚಿಕೆ ಕೂಡಾ ಸೇರಿದೆ.

2017-18ರಿಂದೀಚೆಗೆ ಇವಿಎಂ ಖರೀದಿಗೆ 5,400 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಚುನಾವಣಾ ಆಯೋಗ ಮಾಡಿರುವ ಇವಿಎಂ ಖರೀದಿ ಹಾಗೂ ವಿವಿಪ್ಯಾಟ್ ಖರೀದಿ ಸೇರಿದೆ. ಚುನಾವಣಾ ಸಂಬಂಧಿ ವೆಚ್ಚಗಳಿಗಾಗಿ ಪ್ರಸಕ್ತ ವರ್ಷದ ಬಜೆಟ್‍ನಲ್ಲಿ ಕಾನೂನು ಸಚಿವಾಲಯ 1464 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿದೆ. ಇದರಲ್ಲಿ ಬಾಕಿ ಬಿಲ್ ಪಾವತಿಗಾಗಿ 1000 ಕೋಟಿ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ನಡೆಯುವ ಚುನಾವಣೆ ವೆಚ್ಚಕ್ಕಾಗಿ 349 ಕೋಟಿ ರೂಪಾಯಿ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News