ಬಾಲಕರಿಗೆ ಲೈಂಗಿಕ ಕಿರುಕುಳ: ಪಾದ್ರಿಯ ಬಂಧನ

Update: 2019-07-07 16:01 GMT

ಕೊಚ್ಚಿ, ಜೂ. 7: ಬಾಲ ಮಂದಿರದ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 40ರ ಹರೆಯದ ಕ್ರಿಶ್ಚಿಯನ್ ಪಾದ್ರಿಯೊಬ್ಬರನ್ನು ರವಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿಗೆ ಸಮೀಪದ ಪೆರುಂಬಡೋಮ್ ಸಮೀಪದಲ್ಲಿ ಇರುವ ಬಾಲ ಮಂದಿರದಲ್ಲಿ ಶನಿವಾರ ರಾತ್ರಿ ಪಾದ್ರಿ ಜಾರ್ಜ್ ಆಲಿಯಾಸ್ ಜೆರ್ರಿ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದಾಗ ಪರಾರಿಯಾದ ಮಕ್ಕಳು ನೀಡಿದ ದೂರಿನ ಹಿನ್ನಲೆಯಲ್ಲಿ ಜಾರ್ಜ್ ಆಲಿಯಾಸ್ ಜೆರ್ರಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜಾರ್ಜ್ ಆಲಿಯಾಸ್ ಜೆರ್ರಿ ಬಡ ಕುಟುಂಬದ ಮಕ್ಕಳಿಗೆ ಆಶ್ರಯ ಹಾಗೂ ಶಿಕ್ಷಣ ನೀಡುವ ಬಾಲಮಂದಿರದ ನಿರ್ದೇಶಕ.

  ಬಾಲಮಂದಿರದಿಂದ ಪರಾರಿಯಾದ 7 ಮಕ್ಕಳು ಶನಿವಾರ ರಾತ್ರಿ ರಸ್ತೆಯಲ್ಲಿ ಭೇಟಿಯಾದ ವ್ಯಕ್ತಿಯೋರ್ವರ ಮೂಲಕ ಫೋನ್ ಮಾಡಿ ಮನೆಯವರಿಗೆ ವಿಚಾರ ತಿಳಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಜ್ ಆಲಿಯಾಸ್ ಜೆರ್ರಿ ವಿರುದ್ಧ ಪೋಸ್ಕೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News