ಕುಟ್ನೊ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಭಾರತದ ಹಿಮಾದಾಸ್ ಗೆ 2ನೆ ಚಿನ್ನ

Update: 2019-07-08 06:34 GMT

ಕುಟ್ನೊ, ಜು.8: ಭಾರತದ ಓಟಗಾರ್ತಿ  ಹಿಮಾದಾಸ್  ಪೊಲೆಂಡ್ ನಲ್ಲಿ  ನಡೆದ ಕುಟ್ನೊ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ   ವನಿತೆಯರ 200 ಮೀಟರ್ ಓಟದಲ್ಲಿ ಚಿನ್ನ ಜಯಿಸಿದ್ದಾರೆ.

ಹಿಮಾದಾಸ್  ಇದರೊಂದಿಗೆ ಅಂತರ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ   ಎರಡನೇ ಚಿನ್ನ ಗೆದ್ದುಕೊಂಡಿದ್ದಾರೆ.

ರವಿವಾರ ಹಿಮಾದಾಸ್ ಅವರು 200 ಮೀಟರ್ ಓಟದಲ್ಲಿ  23.97 ಸೆಕೆಂಡ್ ಗಳಲ್ಲಿ ಗುರಿ ತಲುಪಿಸಿ ಚಿನ್ನಕ್ಕೆ ಮುತ್ತಿಟ್ಟರು.  ಇದೇ ವೇಳೆ ವಿ.ಕೆ.ವಿಸ್ಮಯ  ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರು. ಅವರು 24.06 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರು.

ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಮುಹಮ್ಮದ್ ಅನಸ್ ಪುರುಷರ 200 ಮೀಟರ್ ಓಟದಲ್ಲಿ 21.18 ಸೆಕೆಂಡ್ ಗಳಲ್ಲಿ ಗುರಿ ಸೇರಿ ಇದೇ ವೇಳೆ ಚಿನ್ನ ಬಾಚಿಕೊಂಡರು.

400 ಮೀಟರ್ ಹರ್ಡಲ್ಸ್ ನಲ್ಲಿ ಎಂ.ಪಿ ಜಾಬಿರ್ (50.21 ಸೆ.) ಚಿನ್ನ ಮತ್ತು ಜಿತಿನ್ ಪಾಲ್ (52.26 ಸೆ.) ಕಂಚು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News