ವೈದ್ಯಕೀಯ-ದಂತ ವೈದ್ಯಕೀಯ ಕೋರ್ಸುಗಳ ಮೊದಲನೇ ಸುತ್ತಿನ ಸೀಟು ಹಂಚಿಕೆ

Update: 2019-07-08 12:43 GMT

ಬೆಂಗಳೂರು, ಜು.8: ಸಿಇಟಿ-2019ನೇ ಸಾಲಿನ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಜು.7ರಂದು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

2019ನೇ ಸಾಲಿನಲ್ಲಿ ಸರಕಾರವು ನಿಗದಿಪಡಿಸಿರುವ ಸೀಟ್ ಮ್ಯಾಟ್ರಿಕ್ಸ್ ಅನ್ನು ಅಳವಡಿಸಿಕೊಂಡು, ಅಭ್ಯರ್ಥಿಗಳ ಮೆರಿಟ್ ಮತ್ತು ಅಭ್ಯರ್ಥಿಗಳು ದಾಖಲಿಸಿರುವ ಆಪ್ಷನ್ ಅನ್ನು ಆಧರಿಸಿ ಸೀಟು ಹಂಚಿಕೆ ಮಾಡಲಾಗಿದೆ.

ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಅಗ್ರಿಕಲ್ಚರ್ ಕೋರ್ಸುಗಳಿಗೆ ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ CHOICE ಅನ್ನು ಆಯ್ಕೆ ಮಾಡಿಕೊಳ್ಳಲು ವೆಬ್ ಪೋರ್ಟಲ್‌ನ್ನು ಜು.8ರ ಬೆಳಗ್ಗೆ 11 ರಿಂದ ತೆರೆಯಲಾಗಿದೆ.

ಅಭ್ಯರ್ಥಿಗಳು ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ನಿಗದಿಪಡಿಸಿರುವ ಅರ್ಹತೆ ಮತ್ತು ಮುಂದಿನ ಸುತ್ತಗಳಲ್ಲಿ ಬರಬಹುದಾದ ಸೀಟುಗಳನ್ನು ಗಮನದಲ್ಲಿಟ್ಟುಕೊಂಡು ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ CHOICE ಅನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದೆ.

ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಅಗ್ರಿಕಲ್ಚರ್ ಇತ್ಯಾದಿ ಕೋರ್ಸುಗಳಿಗೆ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ CHOICE ಗಳನ್ನು ಒಂದೇ ವೆಬ್‌ಪೋರ್ಟಲ್‌ನಲ್ಲಿ ಏಕಕಾಲದಲ್ಲಿ ನಮೂದಿಸಬೇಕು.

ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪೈಕಿ ಸರಕಾರ ಸೀಟು ಅಥವಾ ಖಾಸಗಿ ಸೀಟನ್ನು ಪಡೆದು CHOICE-1 ಅನ್ನು ಆಯ್ಕೆ ಮಾಡುವವರು ಮಾತ್ರ ದಾಖಲಾತಿ ಪರಿಶೀಲನೆಗೆ ಹಾಜರುಪಡಿಸಿದ ಅಂದರೆ, ಪರಿಶೀಲನಾ ಪತ್ರದಲ್ಲಿ ನಮೂದಿಸಿರುವ ಎಲ್ಲ ಮೂಲ ದಾಖಲಾತಿಗಳನ್ನು ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು.

ವಿವರವಾದ ಹೆಚ್ಚಿನ ಸೂಚನೆಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟನ್ನು ನೋಡಬಹುದಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News