ನೂತನ ತಂತ್ರಜ್ಞಾನ ಅಳವಡಿಕೆ: ಅಕ್ಟೋಬರ್‌ನಿಂದ ರೈಲುಗಳಲ್ಲಿ ಒಟ್ಟು 4 ಲಕ್ಷ ಅಧಿಕ ಸೀಟುಗಳ ಸೇರ್ಪಡೆ

Update: 2019-07-10 17:28 GMT

ಹೊಸದಿಲ್ಲಿ, ಜು.10: ಈ ವರ್ಷದ ಅಕ್ಟೋಬರ್‌ನಿಂದ ರೈಲ್ವೆಯು ಪವರ್‌ ಕಾರುಗಳಿಂದ ವಿದ್ಯುತ್ ಉತ್ಪಾದಿಸುವ ಬದಲಿಗೆ, ಮೇಲುತಂತಿಗಳ ಮೂಲಕ ಎಂಜಿನ್‌ಗಳಿಗೆ ವಿದ್ಯುತ್ ಪೂರೈಕೆಯಾಗುವಂತಹ ತಂತ್ರಜ್ಞಾನವನ್ನು ಅಳಡಿಸಿಕೊಳ್ಳಲಿದೆ ಆಗ ಪ್ರಯಾಣಿಕರಿಗೆ ಹೆಚ್ಚುವರಿಯಾಗಿ ನಾಲ್ಕು ಲಕ್ಷಕ್ಕೂ ಅಧಿಕ ಹೆಚ್ಚುವರಿ ಸೀಟುಗಳು ಲಭ್ಯವಿರುವುದಾಗಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

 ಪ್ರಸಕ್ತ ಪ್ರತಿಯೊಂದು ರೈಲಿನ ಕೊನೆಗೆ ಒಂದು ಅಥವಾ ಎರಡು ಪವರ್ ಕಾರ್ ‌ಗಳಿದ್ದು, ಅದರಲ್ಲಿ ಡೀಸೆಲ್ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿ ಲಾಗುತ್ತಿದೆ. ಈ ತಂತ್ರಜ್ಞಾನವನ್ನು ‘ಎಂಡ್ ಆನ್ ಜನರೇಶನ್’ ಎಂದು ಕರೆಯಲಾಗುತ್ತದೆ.

ಈಗ ವಿಶ್ವದ ವಿವಿಧೆಡೆ ‘‘ಹೆಡ್ ಆನ್ ಜನರೇಶನ್’ ಎಂಬ ನೂತನ ತಂತ್ರಜ್ಞಾನವು ಬಳಕೆಯಾಗುತ್ತಿದ್ದು,, ಅದರಲ್ಲಿ ಮೇಲುತಂತಿಗಳ ಮೂಲಕ ಪೂರೈಕೆಯಾಗುವ ವಿದ್ಯುತ್‌ನ್ನು ರೈಲ್ವೆ ಕೋಚ್‌ಗಳಿಗೆ ವಿತರಿಸಲಾಗುತ್ತದೆ 2019ರೊಳಗೆ ಭಾರತೀಯ ರೈಲ್ವೆಯ 5 ಸಾವಿರ ಬೋಗಿಗಳು ನೂತನ ತಂತ್ರಜ್ಞಾನದಡಿ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ರೈಲುಗಳು ಪವರ್ ಕಾರ್‌ಗಳ ಬಳಕೆಯನ್ನು ತೊರೆಯಲಿವೆ ಹಾಗೂ ಇನ್ನೂ ಹೆಚ್ಚಿನ ಬೋಗಿಗಳ ಜೋಡಣೆಗೆ ಅವಕಾಶ ದೊರೆಯಲಿದೆ ಹಾಗೂ ರೈಲ್ವೆಯ ಬೊಕ್ಕಸಕ್ಕೆ 6 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ.

ಪವರ್‌ಕಾರ್‌ಗೆ ತಾಸಿಗೆ 40 ಲೀಟರ್ ಡೀಸೆಲ್ ಹಾಗೂ ಹವಾನಿಯಂತ್ರಿತ ಬೋಗಿಗೆ 65-70 ಲೀಟರ್ ಅಗತ್ಯವಿದೆ. ಒಂದು ಲೀಟರ್ ಡೀಸೆಲ್‌ನಿಂದ ಮೂರು ಯೂನಿಟ್ ವಿದ್ಯುತ್ ಒದಗಿಸಲಾಗುತ್ತದೆ. ಹೀಗೆ ಎಸಿ ರಹಿತ ಕೋಚ್‌ಗೆ ಪ್ರತಿ ತಾಸಿಗೆ 120 ಯೂನಿಟ್ ವಿದ್ಯುತ್‌ನ ಅಗತ್ಯವಿದೆ.

ನೂತನ ವ್ಯವಸ್ಥೆಯು ಪರಿಸರ ಸ್ನೇಹಿಯೂ ಆಗಿದ್ದು, ವಾಯು ಹಾಗೂ ಶಬ್ದ ಮಾಲಿನ್ಯವಿರುವುದಿಲ್ಲ. ಅಷ್ಟೇ ಅಲ್ಲದೆ ಇಂಗಾಲದ ಹೊರಸೂಸುವಿಕೆ ಪ್ರಮಾಣವು ಪ್ರತಿ ವರ್ಷ ಪ್ರತಿ ರೈಲಿಗೆ 700 ಎಂಟಿಯಷ್ಟು ಕಡಿಮೆಯಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News