3 ದಾಖಲೆ ಮುರಿದ ಜೆರೆಮಿ

Update: 2019-07-11 18:30 GMT

ಅಪಿಯಾ, ಜು.11: ಯೂತ್ ಒಲಿಂಪಿಕ್ಸ್ ಚಾಂಪಿಯನ್ ಜೆರೆಮಿ ಲಾಲ್‌ರಿನ್ನುಂಗಾ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನ ಮೂರನೇ ದಿನವಾದ ಗುರುವಾರ ಮೂರು ದಾಖಲೆಗಳನ್ನು ಮುರಿದು ಅಮೋಘ ಪ್ರದರ್ಶನ ನೀಡಿದರು. ಗಮನಾರ್ಹ ಪ್ರದರ್ಶನ ನೀಡಿದ 16ರ ಹರೆಯದ ಜೆರೆಮಿ 67 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಸ್ನಾಚ್ ವಿಭಾಗದಲ್ಲಿ 136 ಕೆಜಿ ತೂಕ ಎತ್ತಿ ಹಿಡಿದು ಯೂತ್ ವರ್ಲ್ಡ್, ಏಶ್ಯನ್ ಚಾಂಪಿಯನ್‌ಶಿಪ್ ಹಾಗೂ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ದಾಖಲೆಗಳನ್ನು ಮುರಿದರು.

ಯೂತ್ ವರ್ಲ್ಡ್ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್ ದಾಖಲೆಗಳು ಜೆರೆಮಿ ಹೆಸರಲ್ಲಿದೆ. ಎಪ್ರಿಲ್‌ನಲ್ಲಿ ಚೀನಾದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 134 ಕೆಜಿ ತೂಕ ಎತ್ತಿ ಹಿಡಿದು ಜೆರೆಮಿ ಈ ಸಾಧನೆ ಮಾಡಿದ್ದರು.

ಇತರ ಭಾರತೀಯ ಲಿಫ್ಟರ್‌ಗಳು ಉತ್ತಮ ಪ್ರದರ್ಶನ ತೋರಿದ್ದು, ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಸಹಿತ 7 ಪದಕಗಳನ್ನು ಜಯಿಸಿದ್ದರು. ಅಚಿಂತಾ ಶೆವುಲಿ ಒಟ್ಟು 305 ಕೆಜಿ(136+169 ಕೆಜಿ)ತೂಕ ಎತ್ತಿ ಹಿಡಿದು ಸೀನಿಯರ್ ಹಾಗೂ ಜೂನಿಯರ್ ಪುರುಷರ 73 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದರು. ಮಹಿಳೆಯರ 76 ಕೆಜಿ ವಿಭಾಗದಲ್ಲಿ ಮನ್‌ಪ್ರೀತ್ ಕೌರ್ 207 ಕೆಜಿ(91+116 ಕೆಜಿ)ತೂಕ ಎತ್ತಿ ಹಿಡಿದು ಬಂಗಾರದ ಪದಕ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News