‘ರಾಗದ್ವೇಷ’ವಿಲ್ಲದೆ ಮಾತನಾಡುವುದನ್ನು ಮುಂದುವರಿಸಿ ಬ್ರಿಟನ್ ವಿದೇಶ ಸಚಿವ

Update: 2019-07-13 12:32 GMT

ಲಂಡನ್, ಜು. 12: ಯಾವುದೇ ‘ಭೀತಿ ಅಥವಾ ಪ್ರೀತಿ’ ಇಲ್ಲದೆ ದಿಟ್ಟವಾಗಿ ಮಾತಾಡುವುದನ್ನು ಮುಂದುವರಿಸಿ ಎಂದು ಬ್ರಿಟನ್ ವಿದೇಶ ಸಚಿವ ಜೆರೆಮಿ ಹಂಟ್ ಬ್ರಿಟಿಶ್ ರಾಜತಾಂತ್ರಿಕರನ್ನು ಒತ್ತಾಯಿಸಿದ್ದಾರೆ.

ಅಮೆರಿಕದ ಅಧ್ಯಕ್ಷರನ್ನು ಟೀಕಿಸುವ ಟಿಪ್ಪಣಿಯೊಂದು ಸೋರಿಕೆಯಾದ ಹಿನ್ನೆಲೆಯಲ್ಲಿ, ಅಮೆರಿಕಕ್ಕೆ ಬ್ರಿಟನ್ ರಾಯಭಾರಿ ಕಿಮ್ ಡರೋಚ್ ಬುಧವಾರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ಮನವಿ ಮಾಡಿದ್ದಾರೆ.

‘‘ಯಾವುದೇ ರಾಗ ದ್ವೇಷವಿಲ್ಲದೆ ನಿರ್ಭೀತವಾಗಿ ಮಾತನಾಡುವುದನ್ನು ಮುಂದುವರಿಸಿ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿ ನೇಮಕಾತಿಗಳನ್ನು ಮಾಡುವುದು ಬ್ರಿಟನ್ ಸರಕಾರ ಎನ್ನುವುದನ್ನು ನೆನಪಿನಲ್ಲಿಡಿ’’ ಎಂದು ಬ್ರಿಟಿಶ್ ವಿದೇಶ ಕಚೆರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ನೀಡಿದ ಸಂದೇಶವೊಂದರಲ್ಲಿ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News