ಇಂಗ್ಲೆಂಡ್ ಮಾಜಿ ಸ್ಟ್ರೆಕರ್ ಪೀಟರ್ ಕೌಚ್ ನಿವೃತ್ತಿ

Update: 2019-07-12 19:11 GMT

ಲಂಡನ್, ಜು.12: ಇಂಗ್ಲೆಂಡ್‌ನ ಮಾಜಿ ಸ್ಟ್ರೈಕರ್ ಪೀಟರ್ ಕ್ರೌಚ್ ಶುಕ್ರವಾರ ನಿವೃತ್ತಿ ಪ್ರಕಟಿಸಿದ್ದು ಈ ಮೂಲಕ ತನ್ನ ಎರಡು ದಶಕಗಳಿಗೂ ಅಧಿಕ ವೃತ್ತಿಪರ ಫುಟ್ಬಾಲ್ ಜೀವನಕ್ಕೆ ತೆರೆ ಎಳೆದರು.

38ರ ಹರೆಯದ ಮಾಜಿ ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್, ಲಿವರ್‌ಪೂಲ್ ಹಾಗೂ ಸ್ಟೋಕ್ ಸಿಟಿ ಕ್ಲಬ್‌ನ ಸ್ಟ್ಟ್ರೆಕರ್ ಆಗಿರುವ ಕ್ರೌಚ್ ಕಳೆದ ಋತುವಿನಲ್ಲಿ ಬರ್ನ್ಲೆ ಪರ ಆಡಿದ್ದರು. ಕಳೆದ ತಿಂಗಳು ಅವರ ಒಪ್ಪಂದದ ಅವಧಿ ಕೊನೆಗೊಂಡಿತ್ತು.

 ಕ್ರೌಚ್ ಇಂಗ್ಲೆಂಡ್‌ನ ಪರ 2005ರಿಂದ 2010ರ ತನಕ 42 ಪಂದ್ಯಗಳನ್ನು ಆಡಿದ್ದಾರೆ. ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಇಂಗ್ಲೆಂಡ್‌ನ್ನು ಪ್ರತಿನಿಧಿಸಿದ್ದ ಅವರು ಒಟ್ಟು 22 ಗೋಲುಗಳನ್ನು ಗಳಿಸಿದ್ದಾರೆ. ಚಾಂಪಿಯನ್ ಲೀಗ್ ಫೈನಲ್‌ಗೆ ತಲುಪಿದ್ದ ಕ್ರೌಚ್ ಲಿವರ್‌ಪೂಲ್ ಪರ ಎಫ್‌ಎ ಕಪ್ ಜಯಿಸಿದ್ದರು. ‘‘ಫುಟ್ಬಾಲ್ ಎಂಬ ಅದ್ಭುತ ಗೇಮ್ ನನಗೆ ಎಲ್ಲವನ್ನೂ ನೀಡಿದೆ. ನನಗೆ ನೆರವಾದ ಹಾಗೂ ದೀರ್ಘ ಸಮಯ ಫುಟ್ಬಾಲ್‌ನಲ್ಲಿ ಕಳೆಯಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದು ಕ್ರೌಚ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News