‘ಭಾರತ ಬಿಟ್ಟು ತೊಲಗಿ’ ಚಳವಳಿಗೆ ನಿರ್ಣಯ

Update: 2019-07-13 18:31 GMT

1636: ಮೊಗಲ್ ವಂಶದ ಔರಂಗಜೇಬನನ್ನು ಆತನ ತಂದೆ ಷಹಜಹಾನ್‌ನು ಡೆಕ್ಕನ್‌ನ ವೈಸರಾಯ್ ಆಗಿ ನೇಮಿಸಿದನು.

1853: ನ್ಯೂಝಿಲ್ಯಾಂಡ್‌ನಲ್ಲಿ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆಗಳು ನಡೆದವು.

1914: ದ್ರವ ಇಂಧನ ಚಾಲಿತ ರಾಕೆಟ್ ವಿನ್ಯಾಸಗೊಳಿಸಿದ ಅಮೆರಿಕದ ವಿಜ್ಞಾನಿ ರಾಬರ್ಟ್ ಗೊಡ್ಡಾರ್ಡ್‌ಗೆ ಹಕ್ಕುಸ್ವಾಮ್ಯ ನೀಡಲಾಯಿತು.

1933: ನಾಝಿ ಪಕ್ಷವನ್ನು ಹೊರತುಪಡಿಸಿ ಎಲ್ಲ ರಾಜಕೀಯ ಪಕ್ಷಗಳನ್ನು ಜರ್ಮನಿಯಲ್ಲಿ ನಿಷೇಧಿಸಲಾಯಿತು.
1942: ಬ್ರಿಟಿಷರನ್ನು ಭಾರತದಿಂದ ತೊಲಗಿಸುವ ಸಂಬಂಧ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯಿಂದ ‘ಭಾರತ ಬಿಟ್ಟು ತೊಲಗಿ’ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

1967: ನಾಸಾದಿಂದ ಚಂದ್ರಯಾನ ನೌಕೆ ‘ಸರ್ವೇಯರ್ 4’ ಅನ್ನು ಉಡಾವಣೆ ಮಾಡಲಾಯಿತು.

1987: ತೈವಾನ್ ದೇಶದಲ್ಲಿ ಸುಮಾರು 37 ವರ್ಷಗಳಿಂದ ಇದ್ದ ಸೈನ್ಯಾಡಳಿತ ಅಂತ್ಯ ಕಂಡಿತು.

1997: ಅಲ್ಝೈರ್ಸ್‌ನಲ್ಲಿ ಬಾಂಬ್ ಸ್ಫೋಟಗೊಂಡು 21 ಜನ ಸಾವಿಗೀಡಾದ ಬಗ್ಗೆ ವರದಿಯಾಗಿದೆ.

2002: ಫ್ರೆಂಚ್ ಅಧ್ಯಕ್ಷ ಜಾಕ್ವೆಸ್ ಚಿರಾಕ್ ಅವರ ಹತ್ಯಾ ಯತ್ನ ನಡೆಯಿತು. ಈ ವೇಳೆ ಅದೃಷ್ಟವಶಾತ್ ಅವರು ಸಣ್ಣ ಗಾಯವೂ ಆಗದೆ ಪಾರಾದರು.

2012: ಜಪಾನ್‌ನ ಕಿಯುಶು ದ್ವೀಪ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹದಲ್ಲಿ 20 ಜನ ಸಾವಿಗೀಡಾದರೆ, ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಯಿತು.

2014: ಪ.ಆಫ್ರಿಕ ಪ್ರದೇಶದಲ್ಲಿ ಎಬೋಲಾದಿಂದ ಮೃತರಾದವರ ಸಂಖ್ಯೆ 500ಕ್ಕೇರಿತು.

2014: ಮಹಿಳೆಯರನ್ನು ಬಿಷಪ್ ಆಗಿ ನೇಮಿಸುವ ಪ್ರಸ್ತಾವದ ಪರ ಇಂಗ್ಲೆಂಡ್‌ನ ಚರ್ಚ್ ಮತ ಹಾಕಿತು.

2015: ಜಿನೇವಾದ ಲಾರ್ಜ್ ಹ್ಯಾಡ್ರನ್ ಕೊಲೈಡರ್ ಸಂಸ್ಥೆಯ ವಿಜ್ಞಾನಿಗಳು ಪೆಂಟಾಕ್ವಾರ್ಕ್ ಎಂಬ ಹೊಸ ಅಣುವನ್ನು ಸಂಶೋಧಿಸಿರುವುದಾಗಿ ಘೋಷಿಸಿದರು.

1962: ಬಹುಭಾಷಾ ನಟಿ ಗೀತಾ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ