ಫೇಸ್‌ಬುಕ್‌ಗೆ 34 ಸಾವಿರ ಕೋಟಿ ರೂ. ದಂಡ !: ಕಾರಣವೇನು ಗೊತ್ತಾ ?

Update: 2019-07-13 18:43 GMT

ವಾಶಿಂಗ್ಟನ್, ಜು. 13: ಖಾಸಗಿತನ ಉಲ್ಲಂಘನೆಗಳಿಗಾಗಿ ಫೇಸ್‌ಬುಕ್‌ಗೆ 5 ಬಿಲಿಯ ಡಾಲರ್ (ಸುಮಾರು 34,280 ಕೋಟಿ ರೂಪಾಯಿ) ದಂಡ ವಿಧಿಸುವ ಪ್ರಸ್ತಾಪದ ಪರವಾಗಿ ಅಮೆರಿಕದ ಫೆಡರಲ್ ಟ್ರೇಡ್ ಕಮಿಶನ್ (ಎಫ್‌ಟಿಸಿ) ಈ ವಾರ ಮತ ಹಾಕಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಶುಕ್ರವಾರ ವರದಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಲು ಫೇಸ್‌ಬುಕ್ ಮತ್ತು ಎಫ್‌ಟಿಸಿ ನಿರಾಕರಿಸಿವೆ.

ದಂಡ ವಿಧಿಸುವ ಪ್ರಸ್ತಾಪವು 3-2ರಿಂದ ಅಂಗೀಕೃತವಾಗಿದೆ ಹಾಗೂ ಮತದಾನವು ಪಕ್ಷಾಧಾರಿತವಾಗಿ ನಡೆಯಿತು. ರಿಪಬ್ಲಿಕನ್ ಪಕ್ಷವು ದಂಡ ವಿಧಿಸುವ ಪ್ರಸ್ತಾಪದ ಪರವಾಗಿ ಮತ ಹಾಕಿದರೆ, ಡೆಮಾಕ್ರಟಿಕ್ ಪಕ್ಷದವರು ವಿರೋಧವಾಗಿ ಮತ ಚಲಾಯಿಸಿದರು.

ಈ ದಂಡವು ತಂತ್ರಜ್ಞಾನ ಕಂಪೆನಿಯೊಂದರ ಮೇಲೆ ಎಫ್‌ಟಿಸಿ ವಿಧಿಸಿರುವ ದಂಡಗಳಲ್ಲೇ ಅಧಿಕವಾಗಿದೆ.

ಆದರೆ, ಇದು ಫೇಸ್‌ಬುಕ್ ಮೇಲೆ ಹೆಚ್ಚಿನ ಪರಿಣಾಮ ಬೀರಲಾರದು. ಯಾಕೆಂದರೆ, ಅದು ಕಳೆದ ವರ್ಷ ಸುಮಾರು 56 ಬಿಲಿಯ ಡಾಲರ್ (ಸುಮಾರು 3.84 ಲಕ್ಷ ಕೋಟಿ ರೂಪಾಯಿ) ಆದಾಯ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News