ಜಪಾನ್‌ನ ಶಿಂಟಾರೊ ಮೊಚಿಝುಕಿಗೆ ಪ್ರಶಸ್ತಿ

Update: 2019-07-15 03:23 GMT

ಲಂಡನ್, ಜು.14: ವಿಂಬಲ್ಡನ್ ಜೂನಿಯರ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೊಸ್ ಗಿಮೆನೊರನ್ನು ನೇರ ಸೆಟ್‌ಗಳಿಂದ ಮಣಿಸಿದ ಶಿಂಟಾರೊ ಮೊಚಿಝುಕಿ ಪ್ರಶಸ್ತಿ ಎತ್ತಿ ಹಿಡಿದರು.

ಬಾಲಕರ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಜಪಾನ್‌ನ ಮೊದಲ ಆಟಗಾರ ಎನಿಸಿಕೊಳ್ಳುವುದರೊಂದಿಗೆ ಶಿಂಟಾರೊ ಐತಿಹಾಸಿಕ ಸಾಧನೆ ಮಾಡಿದರು.

16ರ ಬಾಲಕ ಶಿಂಟಾರೊ ತನ್ನ ಮೂರನೇ ಗ್ರಾಸ್ ಕೋರ್ಟ್ ಟೂರ್ನಮೆಂಟ್‌ನ್ನು ಆಡಿದರು. 1969ರಲ್ಲಿ ಕಝುಕೊ ಸವಮಟ್ಸು ಗ್ರಾಸ್ ಕೋರ್ಟ್ ಗ್ರಾನ್‌ಸ್ಲಾಮ್‌ನಲ್ಲಿ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದರು.

  ತಮ್ಮ ದೇಶದ, 2014ರ ಯುಎಸ್ ಓಪನ್ ಫೈನಲಿಸ್ಟ್ ಕೀ ನಿಶಿಕೊರಿ ಅವರಿಂದ ನಾನು ಸಾಕಷ್ಟು ಕಲಿತ್ತಿದ್ದೇನೆ. ಅವರು ನನಗೆ ತುಂಬಾ ಸಲಹೆ ನೀಡಿದ್ದಾರೆೞೞಎಂದು ಶಿಂಟಾರೊ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News