ವಿನೇಶ್ ಫೋಗಾಟ್‌ಗೆ ಚಿನ್ನ

Update: 2019-07-15 03:24 GMT

  ಇಸ್ತಾಂಬುಲ್,ಜು.14: ಭಾರತದ ಮಹಿಳಾ ಕುಸ್ತ್ತಿಪಟು ವಿನೇಶ್ ಫೋಗಾಟ್ ಇಲ್ಲಿ ನಡೆದ ಯಾಸರ್‌ಡೊಗು ಕುಸ್ತಿ ಚಾಂಪಿಯನ್‌ಶಿಪ್‌ನ 53 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ. ಶನಿವಾರ ರಾತ್ರಿ ಇಲ್ಲಿ ನಡೆದ ಫೈನಲ್‌ನಲ್ಲಿ ಫೋಗಾಟ್ ಅವರು ರಶ್ಯದ ಎಕಟೆರಿನಾ ಪೋಲೆಶ್ಚುಕ್‌ವಿರುದ್ಧ 4 -0(11-1, 7-0, 14-4, 9-5 )ಅಂತರದಲ್ಲಿ ಜಯ ಗಳಿಸಿ ಚಿನ್ನಕ್ಕ್ಕೆ ಮುತ್ತಿಟ್ಟಿದ್ದಾರೆ.

 ಕಳೆದ ವಾರ ಫೋಗಾಟ್ ಸ್ಪೇನ್‌ನಲ್ಲಿ ನಡೆದ ಗ್ರಾನ್ ಪ್ರಿನಲ್ಲಿ ಚಿನ್ನ ಪಡೆದಿದ್ದರು.

ಇದಕ್ಕೂ ಮೊದಲು ಸೀಮಾ ಮತ್ತು ಮಂಜು ಕುಮಾರಿ ಕ್ರಮವಾಗಿ 50 ಕೆ.ಜಿ. ಮತ್ತು 59 ಕೆ.ಜಿ. ವಿಭಾಗದಲ್ಲಿ ಚಿನ್ನ ಬಾಚಿಕೊಂಡಿದ್ದರು.

    50 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸೀಮಾ ಅವರು ರಶ್ಯದ ವಲೇರಿಯಾ ಚೆಪ್ಸಾರಾಕೋವಾ ವಿರುದ್ಧ 3-2 ಗೆಲುವಿನೊಂದಿಗೆ ಚಿನ್ನದ ನಗೆ ಬೀರಿದರು. 59 ಕೆ.ಜಿ. ವಿಭಾಗದಲ್ಲಿ ಮಂಜು ಕುಮಾರಿ ಅವರು ಬೆಲಾರಸ್‌ನ ಕತ್ಸರಿಯಾನಾ ಹಂಚಾರ್ ಯಾನುಷ್ಕೆವಿಚ್ ವಿರುದ್ಧ 13-2 ಅಂತರದಲ್ಲಿ ಬಗ್ಗು ಬಡಿದು ಚಿನ್ನ ಪಡೆದರು. ಭಾರತದ ಸಾಕ್ಷಿ ಮಲಿಕ್ ಮತ್ತು ಪೂಜಾ ಧಾಂಡ ಸೋಲು ಅನುಭವಿಸಿ ನಿರ್ಗಮಿಸಿದರು. ಶುಕ್ರವಾರ ಪುರುಷರ ಕುಸ್ತಿಯಲ್ಲಿ 61 ಕೆ.ಜಿ.ವಿಭಾಗದಲ್ಲಿ ರಾಹುಲ್ ಅವಾರೆ ಚಿನ್ನ ಮತ್ತು ಉತ್ಕರ್ಷ್ ಕಂಚು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News