ಮಗ ಇಂಗ್ಲೆಂಡ್‌ನ ಗೆಲುವಿನ ರೂವಾರಿ , ತಂದೆ ನ್ಯೂಝಿಲ್ಯಾಂಡ್ ಬೆಂಬಲಿಗ ...!

Update: 2019-07-15 14:52 GMT

ಲಂಡನ್, ಜು.15: ಬೆನ್ ಸ್ಟೋಕ್ಸ್ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ಗೆಲುವಿನ ರೂವಾರಿ. ಅವರು ಫೈನಲ್‌ನಲ್ಲಿ ಅಜೇಯ 84 ರನ್ ಗಳಿಸಿದ್ದರು. ಸೂಪರ್ ಓವರ್‌ನಲ್ಲೂ 8 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 28ರ ಹರೆಯದ ಬೆನ್ ಸ್ಟೋಕ್ಸ್ ಮೂಲತಃ ನ್ಯೂಝಿಲ್ಯಾಂಡ್‌ನ ನಿವಾಸಿ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅವರ ತಂದೆ-ತಾಯಿ ನ್ಯೂಝಿಲ್ಯಾಂಡ್‌ನಲ್ಲಿ ನೆಲೆಸಿದ್ದಾರೆ. ಸ್ಟೋಕ್ಸ್ ಇಂಗ್ಲೆಂಡ್ ಪರ ಆಡುತ್ತಿದ್ದರೆ ತಂದೆ ಮಾತ್ರ ನ್ಯೂಝಿಲ್ಯಾಂಡ್ ಗೆಲ್ಲಬೇಕೆಂದು ಬಯಸಿದ್ದರು. ಅವರ ತಂದೆ ಗೆರಾರ್ಡ್ ಆ ತಂಡದ ಅಭಿಮಾನಿಯಾಗಿದ್ದಾರೆ.

 ಸ್ಟೋಕ್ಸ್  ನ್ಯೂಝಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್‌ನಲ್ಲಿ 1991, ಜೂ.4ರಂದು ಜನಿಸಿದ್ದರು. ಕೆಲವು ವರ್ಷಗಳ ಕಾಲ ನ್ಯೂಝಿಲ್ಯಾಂಡ್‌ನಲ್ಲಿ ಹೆತ್ತವರೊಂದಿಗೆ ನೆಲೆಸಿದ್ದ ಸ್ಟೋಕ್ಸ್  ಬಳಿಕ ಇಂಗ್ಲೆಂಡ್‌ಗೆ ತೆರಳಿದರು. ಸ್ಟೋಕ್ಸ್ ತಂದೆ ಗೆರಾರ್ಡ್ ನ್ಯೂಝಿಲ್ಯಾಂಡ್‌ನ ಮಾಜಿ ರಗ್ಬಿ ಆಟಗಾರ . ಅವರಿಗೆ ರಗ್ಬಿ ಲೀಗ್‌ ನ ಕೋಚ್ ಹುದ್ದೆ ಕುಂಬಿರಿಯಾದಲ್ಲಿ ಲಭಿಸಿದಾಗ ಅಲ್ಲಿಗೆ ಅವರು ತೆರಳಿದರು. 12ನೇ ಹರೆಯದಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದ ಆಲ್‌ರೌಂಡರ್ ಸ್ಟೋಕ್ಸ್ ಬಳಿಕ ಅಲ್ಲೇ ನೆಲೆಸಿದ್ದರು. ಅವರ ಹೆತ್ತವರು ನ್ಯೂಝಿಲ್ಯಾಂಡ್‌ಗೆ ವಾಪಸಾದರೂ, ಸ್ಟೋಕ್ಸ್  ಮಾತ್ರ ಇಂಗ್ಲೆಂಡ್‌ನಲ್ಲಿ ಉಳಿದುಕೊಂಡು ವೃತ್ತಿಬದುಕು ರೂಪಿಸಿದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News